×
Ad

ಸಂಸ್ಕೃತ ಭಾಷಾ ಅಧ್ಯಯನ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲಾಗುವುದು: ಪದ್ಮಾಶೇಖರ್

Update: 2019-01-31 21:31 IST

ಬೆಂಗಳೂರು, ಜ.31: ಸಂಸ್ಕೃತ ವಿಶ್ವವಿದ್ಯಾಲಯವು ಅಂತರ್‌ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಸಂಸ್ಕೃತ ಭಾಷಾ ಅಧ್ಯಯನವನ್ನು ದೇಶ-ವಿದೇಶಗಳಲ್ಲಿ ವಿಸ್ತರಿಸಲಾಗುವುದು ಎಂದು ಸಂಸ್ಕೃತ ವಿವಿಯ ಕುಲಪತಿ ಪದ್ಮಾಶೇಖರ್ ತಿಳಿಸಿದರು.

ಗುರುವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಏಳನೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ವಿಶ್ವವಿದ್ಯಾಲಯಕ್ಕಾಗಿ 100ಎಕರೆ ಕೊಟ್ಟಿದೆ. ಅದರಲ್ಲಿ ವಿಶ್ವವಿದ್ಯಾಲಯದ ಆವರಣವು ಪರಿಸರ ಸ್ನೇಹಿಯಾಗಿ, ಮಾದರಿ ವಿಶ್ವವಿದ್ಯಾಲಯವಾಗಿ ರೂಪಿಸಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಭವಿಷ್ಯತ್ತಿನಲ್ಲಿ ಪ್ರಾಕೃತ ಭಾಷೆ ಮತ್ತು ಸಾಹಿತ್ಯ, ಯೋಗ, ತೀರ್ಥಕ್ಷೇತ್ರ ಪ್ರವಾಸೋದ್ಯಮ, ದೇವಾಲಯ ಪರಿಕಲ್ಪನೆ ಮತ್ತು ವಾಸ್ತು ವಿನ್ಯಾಸ, ಪ್ರಾಚೀನ ಭಾರತೀಯ ಕಾನೂನು ಮತ್ತು ಆಡಳಿತ ಈ ವಿಷಯಗಳಲ್ಲಿ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ತರಗತಿಗಳನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ಎಂಫಿಲ್ ಮತ್ತು ಪಿಎಚ್‌ಡಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕೋರ್ಸುಗಳಲ್ಲಿ ಅಂತರ್‌ರಾಷ್ಟ್ರೀಯ ಅಧ್ಯಯನಕ್ಕೆ ಒತ್ತು ನೀಡಲಾಗುತ್ತಿದೆ. ಅನೇಕ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ತರಗತಿಗಳನ್ನು ನಡೆಸಲಾಗುತ್ತಿದೆ. ಉದ್ಯೋಗ ಮತ್ತು ಕೌಶಲ್ಯ ಸಂವರ್ಧನೆಯ ದೃಷ್ಟಿಯಿಂದ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ತರಗತಿಗಳನ್ನು ನಡೆಸಲಾಗುತ್ತಿದೆ. ಯುಜಿಸಿ ನೆಟ್ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ. ರಾಷ್ಟ್ರೀಯ ಸೇವಾ ಮುಖಾಂತರ ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ಅವರು ಹೇಳಿದರು.

ರಾಮಕೃಷ್ಣಾಶ್ರಮದ ಅಧ್ಯಕ್ಷ ಡಾ.ಸರಸ್ವತಿ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಭಾಷೆ ದೈವ ಹಾಗೂ ಆಧ್ಯಾತ್ಮಿಕ ಭಾಷೆಯಾಗಿದ್ದು, ಈ ಭಾಷೆಯಲ್ಲಿ ಮಾನವೀಯ ವೌಲ್ಯವಿದೆ. ಸಂಸ್ಕೃತಕ್ಕೆ ತನ್ನದೆ ಇತಿಹಾಸವಿದ್ದು, ಜನಸಾಮಾನ್ಯರ ಭಾಷೆಯಾಗಿ ಬೆಳೆಯಬೇಕಾಗಿದೆ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ 4ಮಂದಿ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಾದ ಎಂ.ಸಿ.ನಾಗರಾಜ, ವ್ನಿೇಶ್ವರ ಭಟ್ಟ, ಉದ್ದಣ್ಣ ಹಾಗೂ ಕವಿತಾ ಭಟ್‌ಗೆ ಪಿಎಚ್‌ಡಿ ಪದವಿ ನೀಡಲಾಯಿತು. ಹಾಗೂ ಜಗಳೂರು ತಾಲೂಕಿನ ಗವಿಮಠಾಧ್ಯಕ್ಷ ನಾಲ್ವಡಿ ಶಿವಚಾರ್ಯ ಸ್ವಾಮೀಜಿಗೆ ಡಿ.ಲಿಟ್‌ನ್ನು ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News