ಸ್ಪೇನ್: ಮಹಿಳಾ ಫುಟ್ಬಾಲ್ ಕ್ಲಬ್ ಪಂದ್ಯ ವೀಕ್ಷಿಸಿದ ದಾಖಲೆ ಸಂಖ್ಯೆಯ ಪ್ರೇಕ್ಷಕರು!

Update: 2019-01-31 18:50 GMT

ಮ್ಯಾಡ್ರಿಡ್, ಜ.31:ಅಥ್ಲೆಟಿಕ್ ಬಿಲ್ಬಾವೊ ಹಾಗೂ ಅಟ್ಲೆಟಿಕೊ ಮ್ಯಾಡ್ರಿಡ್ ಮಧ್ಯೆ ಬುಧವಾರ ನಡೆದಿದ್ದ ಮಹಿಳಾ ಫುಟ್ಬಾಲ್ ಪಂದ್ಯವೊಂದನ್ನು ವೀಕ್ಷಿಸಲು 48,121ರಷ್ಟು ಪ್ರೇಕ್ಷಕರು ಹಾಜರಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಯುರೋಪ್‌ನಲ್ಲಿ ಕ್ಲಬ್ ಹಂತದ ಮಹಿಳಾ ಪಂದ್ಯದಲ್ಲಿ ಇದೇ ಮೊದಲ ಬಾರಿ ದಾಖಲೆ ಸಂಖ್ಯೆಯ ಪ್ರೇಕ್ಷಕರು ಹಾಜರಾಗಿದ್ದಾರೆ ಎಂದು ಅಥ್ಲೆಟಿಕ್ ಬಿಲ್ಬಾವೊ ತಿಳಿಸಿದೆ.

ಬುಧವಾರ ಅಥ್ಲೆಟಿಕ್ಸ್ ಸ್ಯಾನ್ ಮಮೆಸ್ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಹಾಜರಾತಿಯು ಸ್ಪೇನ್‌ನಲ್ಲಿ ನಡೆದ ಕ್ಲಬ್ ಹಾಗೂ ರಾಷ್ಟ್ರೀಯ ತಂಡಗಳ ಪಂದ್ಯಗಳಲ್ಲಿ ಒಂದು ವಿಶಿಷ್ಟ ದಾಖಲೆಯಾಗಿದೆ ಎಂದು ಸ್ಪಾನೀಶ್ ಲೀಗ್ ತಿಳಿಸಿದೆ. ಅಟ್ಲೆಟಿಕೊ ಮ್ಯಾಡ್ರಿಡ್ ತಂಡ 2-0 ಅಂತರದಿಂದ ಜಯ ಸಾಧಿಸಿ ಕೊಪಾ ಡಿ ಲಾ ರೆನಾ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದೆ. 1999ರಲ್ಲಿ ರೋಸ್‌ಬೌಲ್‌ನಲ್ಲಿ ನಡೆದಿದ್ದ ಅಮೆರಿಕ ಹಾಗೂ ಚೀನಾ ನಡುವಿನ ಮಹಿಳಾ ವಿಶ್ವಕಪ್ ಪಂದ್ಯವನ್ನು 90,185 ಜನರು ವೀಕ್ಷಿಸಿದ್ದರು. ಇದು ಮಹಿಳಾ ಫುಟ್ಬಾಲ್‌ನಲ್ಲಿ ದಾಖಲೆಯಾಗಿ ಉಳಿದಿದೆ. 2015ರಲ್ಲಿ ಲಂಡನ್‌ನ ವಿಂಬ್ಲೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಹಾಗೂ ಜರ್ಮನಿ ಮಧ್ಯೆ ನಡೆದಿದ್ದ ಪಂದ್ಯವನ್ನು 55,000 ಪ್ರೇಕ್ಷಕರು ವೀಕ್ಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News