ಈಜಿಪ್ಟ್: 40 ಪ್ರಾಚೀನ ಮಮ್ಮಿಗಳು ಪತ್ತೆ

Update: 2019-02-02 17:25 GMT

ಕೈರೋ, ಫೆ. 2: ಕೈರೋದ ದಕ್ಷಿಣದಲ್ಲಿರುವ ಮರುಭೂಮಿ ರಾಜ್ಯ ಮಿನ್ಯದಲ್ಲಿ ಸುಮಾರು 40 ಮಮ್ಮಿಗಳನ್ನು ಒಳಗೊಂಡಿರುವ ಹಲವಾರು ಪ್ರಾಚೀನ ಸ್ಮಶಾನ ಕೋಣೆಗಳನ್ನು ಪತ್ತೆಹಚ್ಚಿರುವುದಾಗಿ ಈಜಿಪ್ಟ್ ಹೇಳಿದೆ.

ಈ ಕೋಣೆಗಳನ್ನು ಬಂಡೆಗಲ್ಲುಗಳಲ್ಲಿ ಕೊರೆಯಲಾಗಿದೆ ಎಂದು ಹೊಸ ಆವಿಷ್ಕಾರದ ಸ್ಥಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು ತಿಳಿಸಿದರು.

ಅವುಗಳು ಟಾಲೆಮಿಕ್ ಅಥವಾ ಆರಂಭಿಕ ರೋಮನ್ ಸಾಮ್ರಾಜ್ಯ ಅಥವಾ ಬೈಝಾಂಟೈನ್ ಅವಧಿಯಲ್ಲಿ ಬದುಕಿದ್ದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದಾಗಿದ್ದಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಮ್ಮಿಗಳು ಉತ್ತಮ ಸ್ಥಿತಿಯಲ್ಲಿವೆ ಹಾಗೂ ಅವುಗಳ ಪೈಕಿ ಕನಿಷ್ಠ 10 ಮಕ್ಕಳದ್ದಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News