ಉತ್ತರ ಅಮೆರಿಕದಲ್ಲಿ ಕನಿಷ್ಠ ಉಷ್ಣಾಂಶ ದಾಖಲು

Update: 2019-02-02 18:37 GMT

1815: ವಿಶ್ವದ ಪ್ರಥಮ ವ್ಯಾವಹಾರಿಕ ಗಿಣ್ಣು(ಚೀಸ್) ಫ್ಯಾಕ್ಟರಿ ಸ್ವಿಟ್ಝರ್ಲ್ಯಾಂಡ್‌ನಲ್ಲಿ ಸ್ಥಾಪನೆಯಾಯಿತು.

1931: ನ್ಯೂಝಿಲೆಂಡ್‌ನ ನೇಪಿಯರ್ ಸುತ್ತಮುತ್ತ ಸಂಭವಿಸಿದ ಭಾರೀ ಭೂಕಂಪಕ್ಕೆ ನೂರಾರು ಜನ ಸಾವನ್ನಪ್ಪಿದರು. ಸುಮಾರು 10,000 ಜನ ಗಾಯಗೊಂಡರು.

1947: ಉತ್ತರ ಅಮೆರಿಕ ಇಂದು ಅತ್ಯಂತ ಕನಿಷ್ಠ ಉಷ್ಣಾಂಶವನ್ನು ದಾಖಲಿಸಿತು. ಕೆನಡಾ ದೇಶದ ಯುಕೋನ್ ಎಂಬಲ್ಲಿ -63 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.

1959: ಅಮೆರಿಕ ಏರ್‌ಲೈನ್ಸ್‌ನ ಇಲೆಕ್ಟ್ರಾ ಎಂಬ ವಿಮಾನ ನ್ಯೂಯಾರ್ಕ್‌ನ ಈಸ್ಟ್ ರಿವರ್ ಎಂಬಲ್ಲಿ ಪತನವಾಯಿತು. ಪರಿಣಾಮ 65 ಜನ ಸಾವನ್ನಪ್ಪಿದರು.

1962: ಆಹಾರ ಹಾಗೂ ಔಷಧಿ ಹೊರತುಪಡಿಸಿ ಕ್ಯೂಬಾದೊಂದಿಗಿನ ಎಲ್ಲ ವ್ಯಾಪಾರವನ್ನು ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ರದ್ದು ಮಾಡಿದರು.

2006: ಈಜಿಪ್ಟ್‌ನ ಹಳೆಯ, ದ ಅಲ್ ಸಲಾಮ್ ಬೊಕಾಶಿಯೋ ಹೆಸರಿನ ಹಡಗು(ಫೆರ್ರಿ) ಕೆಂಪು ಸಮುದ್ರದಲ್ಲಿ ಮುಳುಗಿತು. ಈ ಸಂದರ್ಭದಲ್ಲಿ ಹಡಗಿನಲ್ಲಿದ್ದ ಸೌದಿ ಅರೇಬಿಯಾದಿಂದ ಈಜಿಪ್ಟ್‌ಗೆ ಮರಳುತ್ತಿದ್ದ ಸುಮಾರು 1,400 ಕಾರ್ಮಿಕರು ಅಸುನೀಗಿದರು.

2007: ಇರಾಕ್ ಬಗ್ಧಾದ್‌ನಲ್ಲಿ ಆತ್ಮಹತ್ಯಾ ಬಾಂಬರ್ ಓರ್ವ ಲಾರಿಯೊಂದಿಗೆ ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮ ಸುಮಾರು 130 ಜನರು ಸಾವನ್ನಪ್ಪಿದರು.

1952: ಹಿಂದಿಯ ಕಲಾತ್ಮಕ ಸಿನೆಮಾಗಳ ನಿರ್ದೇಶಕಿ, ನಟಿ, ಬರಹಗಾರ್ತಿ ದೀಪ್ತಿ ನಾವಲ್ ಜನ್ಮದಿನ.

1969: ದ್ರಾವಿಡ ಮುನ್ನೇಟ್ರ ಕಳಗಂ ಪಕ್ಷದ ಸಂಸ್ಥಾಪಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ನಿಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ