ಐದನೇ ಏಕದಿನ ಕ್ರಿಕೆಟ್: ಕಿವೀಸ್ ವೇಗಕ್ಕೆ ಭಾರತ ತತ್ತರ

Update: 2019-02-03 03:46 GMT

ವೆಲ್ಲಿಂಗ್ಟನ್, ಫೆ. 3: ಅತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿರುವ ಪ್ರವಾಸಿ ಭಾರತ ತಂಡ, ಐದನೇ ಪಂದ್ಯದಲ್ಲೂ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿದೆ.

ನ್ಯೂಜಿಲ್ಯಾಂಡಿನ ವೇಗದ ದಾಳಿಗೆ ಭಾರತದ ಬ್ಯಾಟ್ಸ್‌ಮನ್‌ ಗಳು ಪೆವಿಲಿಯನ್‌ಗೆ ಪರೇಡ್ ನಡೆಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವನ್ನು ಹೆನ್ರಿ ಹಾಗೂ ಬೌಟ್ ಸಿಂಹಸ್ವಪ್ನವಾಗಿ ಕಾಡಿದರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (2) ಮತ್ತು ಶಿಖರ್ ಧವನ್ (6), ಯುವ ಆಟಗಾರ ಶುಭಮನ್ ಗಿಲ್ (7) ಹಾಗೂ ಅನುಭವಿ ಆಟಗಾರ ಎಂ.ಎಸ್.ಧೋನಿ (1) ಅಗ್ಗದ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಮ್ಯಾಟ್ ಹೆನ್ರಿ 7 ಓವರ್‌ಗಳಲ್ಲಿ 11 ರನ್‌ಗೆ 2 ವಿಕೆಟ್ ಕಬಳಿಸಿದರೆ, ಟ್ರೆಂಟ್ ಬೌಟ್ 6 ಓವರ್‌ಗಳಲ್ಲಿ 12 ರನ್‌ಗಳಿಗೆ ಎರಡು ವಿಕೆಟ್ ಕಿತ್ತರು.

ಅಂಬಟಿ ರಾಯುಡು (3) ಹಾಗೂ ವಿಜಯ್ ಶಂಕರ್ (12) ಭಾರತದ ಕುಸಿತ ತಡೆಯುವ ಹರಸಾಹಸ ಮಾಡಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಭಾರತ 16 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ40 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News