ಪ.ಬಂಗಾಳದಲ್ಲಿ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಯಲು ಅನುಮತಿ ನಿರಾಕರಣೆ

Update: 2019-02-03 09:07 GMT

ಕೋಲ್ಕತಾ,ಫೆ.3: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಬಲುರ್‌ಘಾಟ್‌ನಲ್ಲಿ ಇಳಿಸಲು ಅನುಮತಿ ನಿರಾಕರಿಸುವುದರೊಂದಿಗೆ ಪಶ್ಚಿಮಬಂಗಾಳದಲ್ಲಿ ಈಗ ನಡೆಯುತ್ತಿರುವ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಮಧ್ಯೆದ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ.

ಉತ್ತರಪ್ರದೇಶ ಸಿಎಂ ಜೊತೆಗೆ ರಾಜ್ಯದ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ದಕ್ಷಿಣ ದಿನಾಜ್‌ಪುರ್ ಜಿಲ್ಲೆಯ ಬಲುರ್‌ಘಾಟ್ ಹಾಗೂ ಉತ್ತರ ದಿನಾಜ್‌ಪುರ ಜಿಲ್ಲೆಯ ರೈಗಂಜ್‌ನಲ್ಲಿ ಗಣತಂತ್ರ ಬಚಾವೊ ರ್ಯಾಲಿಯಲ್ಲಿ ಭಾಗವಹಿಸುವ ಕಾರ್ಯಕ್ರಮವಿತ್ತು.

ಆದಿತ್ಯನಾಥ್ ಟೆಲಿಕಾನ್ಫರೆನ್ಸ್ ಮೂಲಕ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಮೂಲಗಳು ತಿಳಿಸಿವೆ. ಆದಿತ್ಯನಾಥ್ ಆಗಮನಕ್ಕೆ ತಡೆಯೊಡ್ಡಿದ್ದನ್ನು ಪ್ರತಿಭಟಿಸಿ ದಕ್ಷಿಣ ದಿನಾಜ್‌ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೌಸ್ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

 ‘‘ಬಲುರ್‌ಘಾಟ್‌ನಲ್ಲಿ ಬಿಜೆಪಿ ಅನುಮತಿ ಪಡೆದಿದೆ. ಬಲುರ್‌ಘಾಟ್‌ನಲ್ಲಿ ಖಾಯಂ ಏರ್‌ಪೋರ್ಟ್ ಯಿದೆ. ಖಾಯಂ ಹೆಲಿಪ್ಯಾಡ್‌ನಲ್ಲಿ ಅನುಮತಿ ನೀಡುವುದರಿಂದ ಏನು ಹಾನಿಯಾಗುತ್ತದೆ. ಇದು ನಿಜಕ್ಕೂ ಪಶ್ಚಿಮಬಂಗಾಳ ಸರಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ’’ಎಂದು ಮಾಜಿ ಟಿಎಂಸಿ ನಾಯಕ, ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಮುಕುಲ್ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News