×
Ad

ಕಡ್ಡಾಯ ಹಾಜರಿಗೆ ಆಡಳಿತ ಪಕ್ಷದ ಶಾಸಕರಿಗೆ ‘ವಿಪ್’ ಜಾರಿ

Update: 2019-02-05 20:13 IST

ಬೆಂಗಳೂರು, ಫೆ. 5: ವಿಧಾನ ಮಂಡಲ ಜಂಟಿ ಅಧಿವೇಶನ, 2019-20ನೆ ಸಾಲಿನ ಆಯವ್ಯಯ ಮಂಡನೆ, ವಿತ್ತೀಯ ಕಾರ್ಯಕಲಾಪ, ಶಾಸಕಗಳು ಮತ್ತು ಬಜೆಟ್ ಅನುಮೋದನೆ ಹಿನ್ನೆಲೆಯಲ್ಲಿ ಫೆ.6ರಿಂದ 15ರ ವರೆಗೆ ಆಡಳಿತದ ಪಕ್ಷದ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದು ವಿಪ್ ಜಾರಿ ಮಾಡಲಾಗಿದೆ.

ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರು ಕಾರ್ಯ ಕಲಾಪ ಪ್ರಾರಂಭಿಸಿ, ಮುಕ್ತಾಯಗೊಳಿಸುವವರೆಗೂ ಸದನದಲ್ಲಿ ಎಲ್ಲ ಸದಸ್ಯರು ಕಡ್ಡಾಯವಾಗಿ ಉಪಸ್ಥಿತರಿದ್ದು, ಸರಕಾರದ ಪರವಾಗಿ ಮತ ಚಲಾಯಿಸಬೇಕು ಎಂದು ಸರಕಾರಿ ಮುಖ್ಯ ಸಚೇತಕ ಗಣೇಶ್ ಪಿ.ಹುಕ್ಕೇರಿ ‘ವಿಪ್’ ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News