ಮೇಲುಕೋಟೆ: ‘ಹೊಸ ಜೀವನ ದಾರಿ’ ಕೇಂದ್ರದಲ್ಲಿ ಫೆ.23, 24ರಂದು ‘ಅಭಿವೃದ್ಧಿ ಸಂವಾದ-2019’ ಶಿಬಿರ

Update: 2019-02-07 04:51 GMT

ಬೆಂಗಳೂರು, ಫೆ.7: ಮೇಲುಕೋಟೆಯ ‘ಹೊಸ ಜೀವನ ದಾರಿ’ ಕೇಂದ್ರದಲ್ಲಿ ಫೆ.23 ಮತ್ತು 24ರಂದು ‘ಅಭಿವೃದ್ಧಿ ಸಂವಾದ-2019’ ಶಿಬಿರವನ್ನು ಆಯೋಜಿಸಲಾಗಿದೆ.

ಜನಪದ ಸೇವಾ ಟ್ರಸ್ಟ್ ಆಯೋಜಿಸಿರುವ ಈ ಶಿಬಿರದಲ್ಲಿ ‘ಅಭಿವೃದ್ಧಿಯ ರಾಜಕೀಯ ಪರಿಕಲ್ಪನೆ’ ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಸಂವಾದಗಳು ನಡೆಯಲಿವೆ. ಚಿಂತಕ, ಲಕ್ಷ್ಮೀಶ ತೋಳ್ಪಾಡಿ, ಅರ್ಥಶಾಸ್ತ್ರಜ್ಞ ಎಂ.ಎಸ್.ಶ್ರೀರಾಮ್, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಪ್ರಾಧ್ಯಾಪಕ ಸುಜಿತ್ ಸಿನ್ಹ ಮತ್ತು ಮಾಜಿ ಶಾಸಕ ಬಿ.ಆರ್.ಪಾಟೀಲ್ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಲಿದ್ದಾರೆ.

ಅಝೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ಈ ಶಿಬಿರದ ನಿರ್ದೇಶಕರಾಗಿರುತ್ತಾರೆ.

ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವರ ಆಸಕ್ತರು ಫೆ.15ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಮೊದಲು ಆಗಮಿಸಿದ 25 ಮಂದಿಗೆ ಮಾತ್ರ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ.: 8618770716/ 9945290163 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News