ಅಫ್ಘಾನ್ ಪಡೆಗಳಿಂದ ತಾಲಿಬಾನ್‌ನ ಸೆರೆಯಲ್ಲಿದ್ದ ಏಳು ನಾಗರಿಕರ ಬಂಧಮುಕ್ತಿ

Update: 2019-02-10 18:37 GMT

 ಲಷ್ಕರ್‌ಘಾಹ್, ಫೆ.10: ಅಫ್ಘಾನಿಸ್ತಾನ ಸೇನಾಪಡೆಗಳು, ದಕ್ಷಿಣ ಹೆಲ್ಮಂಡ್ ಪ್ರಾಂತದ ವಾಶಿಹಿರ್ ಜಿಲ್ಲೆಯಲ್ಲಿರುವ ತಾಲಿಬಾನ್‌ನ ಬಂಧನಕೇಂದ್ರವೊಂದರ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಏಳು ಮಂದಿ ಬಂಧಿತರನ್ನು ಬಿಡುಗಡೆಗೊಳಿಸಿರುವುದಾಗಿ ಅಫ್ಘಾನ್ ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಕ್ಷಿಸಲ್ಪಟ್ಟ ಬಂಧಿಯಾಳುಗಳೆಲ್ಲರೂ ಸಾಮಾನ್ಯ ನಾಗರಿಕರಾಗಿದ್ದು, ಅವರನ್ನು ತಾಲಿಬಾನ್ ಬಂಡುಕೋರರು ಅಪಹರಿಸಿದ್ದರೆಂದು ಹೇಳಿಕೆಯೊಂದು ತಿಳಿಸಿದೆ. ಸೇನಾ ಕಾರ್ಯಾಚರಣೆಯ ಬಳಿಕ ತಾಲಿಬಾನ್‌ನ ಬಂಧನ ಕೇಂದ್ರವನ್ನು ನಾಶಪಡಿಸಲಾಗಿದೆಯೆಂದು ಅದು ತಿಳಿಸಿದೆ.

ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಓರ್ವ ತಾಲಿಬಾನ್ ಬಂಡುಕೋರ ಹತನಾಗಿದ್ದಾನೆ ಹಾಗೂ ಬಂಡುಕೋರರ ಒಂದು ವಾಹನವನ್ನು ನಾಶಪಡಿಸಲಾಗಿದೆಯೆಂದು ಸೇನೆಯ ಹೇಳಿಕೆಯು ತಿಳಿಸಿದೆ.

ಗುರುವಾರ ರಾತ್ರಿ ಅಫ್ಘಾನ್ ಪಡೆಗಳು ಉತ್ತರ ಕುಂದುಝ್ ಪ್ರಾಂತದಲ್ಲಿರುವ ಚಾರ್ ದಾರಾ ಜಿಲ್ಲೆಯಲ್ಲಿರುವ ತಾಲಿಬಾನ್ ಬಂಧನ ಕೇಂದ್ರದ ಮೇಲೆ ದಾಳಿ ನಡೆಸಿ ಐದು ಮಂದಿ ನಾಗರಿಕರನ್ನು ಬಿಡುಗಡೆಗೊಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News