ಚಾಕು ತೋರಿಸಿ ಸರಗಳವು: ಮೂವರ ಬಂಧನ

Update: 2019-02-11 16:13 GMT

ಬೆಂಗಳೂರು, ಫೆ.11: ಆಟೊಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದ ಆರೋಪದಡಿ ಮೂವರನ್ನು ಇಲ್ಲಿನ ಹೆಬ್ಬಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಾಗವಾರದ ಸೈಫ್‌ಖಾನ್(28), ಗೋವಿಂದಪುರದ ನಯಾಬ್ ರಸುಲ್(29) ಮತ್ತು ಹೆಗಡೆ ನಗರದ ಅಹ್ಮದ್(29) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 9.5 ಲಕ್ಷ ರೂ. ಮೌಲ್ಯದ 175 ಗ್ರಾಂ ಚಿನ್ನಾಭರಣ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಬ್ಬಾಳದ ಎರಡು ಸರಗಳ್ಳತನ, ಒಂದು ಸುಲಿಗೆ, 2 ಕನ್ನಗಳವು, 2 ದ್ವಿಚಕ್ರ ವಾಹನ ಕಳವು, ನಂದಿನಿ ಲೇಔಟ್‌ನ ಒಂದು ಸುಲಿಗೆ, ಜಾಲಹಳ್ಳಿಯ ಒಂದು ಸರಗಳವು 12 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಕಳವು ಮಾಡುತ್ತಿದ್ದುದ್ದಲ್ಲದೆ, ಒಂಟಿ ಮಹಿಳೆಯರ ಸರ ಕಳವು ಮಾಡಿ, ಪರಾರಿಯಾಗುತ್ತಿದ್ದರು. ಈ ಹಿಂದೆ ಜೈಲಿಗೆ ಹೋಗಿ ಬಂದಿದ್ದರೂ, ಕಳವು ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News