×
Ad

ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಗ್ರಾಮಸಭೆಯ ಪಾತ್ರ ಮಹತ್ವದ್ದು: ಎಲ್.ಕೆ.ಅತೀಕ್ ಅಹಮದ್

Update: 2019-02-12 22:13 IST

ಬೆಂಗಳೂರು, ಫೆ.12: ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಗ್ರಾಮಸಭೆಯ ಪಾತ್ರ ಮಹತ್ವದ್ದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಹಮದ್ ತಿಳಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪ್ಯಾಂಥರ್ಸ್ ರನ್ನರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರನ್ ಫಾರ್ ಗ್ರಾಮಸಭಾ ಮ್ಯಾರಥಾನ್‌ಗೆ ಸಂಬಂಧಿಸಿದ ಜಾಲತಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಪಾರದರ್ಶಕತೆ ತರಲು ಗ್ರಾಮಸಭೆಗಳು ಸಹಕಾರಿಯಾಗಿದ್ದು, ಗ್ರಾಮೀಣರ ಹಕ್ಕುಗಳನ್ನು ಸಶಕ್ತಗೊಳಿಸುತ್ತವೆ. ಅವುಗಳ ಕುರಿತು ಅರಿವು ಮೂಡಿಸಲು ಖಾಸಗಿ ಸಂಸ್ಥೆಯೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.

ಗ್ರಾಮೀಣ ಜನರ ಹಕ್ಕುಗಳನ್ನು ಪ್ರತಿನಿಧಿಸುವ ಗ್ರಾಮ ಸಭೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿದ್ದು, ಗ್ರಾಮಸಭೆಯ ಕುರಿತು ಅರಿವು ಮೂಡಿಸಲು ಇದೇ 17ರಂದು ಬಾಗಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಸಭೆಗಾಗಿ ಓಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿ ಇದೇ ವೇಳೆ ಓಟದ ಟೀ ಶರ್ಟ್‌ನ್ನು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News