ಪುಲ್ವಾಮ ದಾಳಿಗೆ 2 ದಿನಗಳ ಮೊದಲು ಹರಿದಾಡಿತ್ತು ಬೆದರಿಕೆಯ ವಿಡಿಯೋ

Update: 2019-02-15 11:26 GMT

ಜಮ್ಮು, ಫೆ.15: ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೂಲಕ ಕಳೆದ ಎರಡು ದಿನಗಳಿಂದ ಹರಿದಾಡುತ್ತಿದ್ದ ವಿಡಿಯೊ ಬಗ್ಗೆ ಗುಪ್ತಚರ ವಿಭಾಗ ಗಮನ ಹರಿಸಿದ್ದರೆ, ಸಿಆರ್‍ಪಿಎಫ್ ಸಿಬ್ಬಂದಿ ಮೇಲೆ ಪುಲ್ವಾನಾದಲ್ಲಿ ನಡೆದ ಉಗ್ರರ ದಾಳಿಯನ್ನು ತಪ್ಪಿಸಬಹುದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ದಾಳಿಯ ಹೊಣೆ ಹೊತ್ತಿರುವ ಜೈಶ್, ಕಳೆದ ಎರಡು ದಿನಗಳ ಹಿಂದೆ ವಿಡಿಯೊ ಮೂಲಕ ಆನ್ ಲೈನ್ ನಲ್ಲಿ ಎಚ್ಚರಿಕೆ ನೀಡಿ ಸುಧಾರಿತ ಸ್ಫೋಟಕ ಸಾಧನಗಳ ಮೂಲಕ ಆತ್ಮಹತ್ಯಾ ದಾಳಿ ನಡೆಸುವ ಎಚ್ಚರಿಕೆ ನೀಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ  ಎನ್ ಡಿಟಿವಿ ವರದಿ ಮಾಡಿದೆ.

ಎರಡು ದಿನಗಳ ಹಿಂದೆ ಬಿಡುಗಡೆ ಮಾಡಿರುವ ಈ ವಿಡಿಯೊದಲ್ಲಿ ಅಪ್ಘಾನಿಸ್ತಾನದ ದಾಳಿಯನ್ನು ತೋರಿಸಲಾಗಿತ್ತು. ಇದು ವಾಹನದಲ್ಲಿ ಸ್ಫೋಟಕಗಳನ್ನು ಒಯ್ದು ದಾಳಿ ನಡೆಸಿದ ದೃಶ್ಯವನ್ನು ತೋರಿಸಿತ್ತು. ಈ ವಿಡಿಯೊವನ್ನು ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಅಪರಾಧ ಪತ್ತೆ ವಿಭಾಗ ಶೇರ್ ಮಾಡಿದ್ದರೂ, ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಇಷ್ಟು ಮಾತ್ರವಲ್ಲದೇ, ದಾಳಿ ನಡೆಸಿದ ಅದಿಲ್ ಅಹ್ಮದ್ ದರ್ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News