ಸಿಧುವನ್ನು ನಿಷೇಧಿಸುವ ಕರೆ ಯುವಕರ ಗಮನ ತಪ್ಪಿಸುವ ತಂತ್ರ: ಕಪಿಲ್ ಶರ್ಮಾ

Update: 2019-02-19 05:22 GMT

  ಹೊಸದಿಲ್ಲಿ, ಫೆ.19: ನೀವು ಭಯೋತ್ಪಾದಕ ವಿಷಯದ ಬಗ್ಗೆ ಮಾತನಾಡಬೇಕಾಗಿದೆ. ಸಮಸ್ಯೆಯತ್ತ ಗಮನ ಹರಿಸಬೇಕಾಗಿದೆ. ಯುವಕರ ಗಮನವನ್ನು ಬೇರಡೆ ಸೆಳೆಯುವುದು ಸರಿಯಲ್ಲ. ಸಿಧುವನ್ನು ನಿಷೇಧಿಸುವ ಕರೆ ನೀಡಿದರೆ ನಮ್ಮ ಸಮಸ್ಯೆ ಪರಿಹಾರವಾಗುವುದಿಲ್ಲ. ಇಂತಹ ಕರೆ ಯುವಕರ ಗಮನವನ್ನು ತಪ್ಪಿಸುವ ತಂತ್ರ ಎಂದು ನಟ ಹಾಗೂ ಕಾಮಿಡಿಯನ್ ಕಪಿಲ್ ಶರ್ಮಾ ಹೇಳಿದ್ದಾರೆ.

 ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪುಲ್ವಾಮ ದಾಳಿಯ ಬಳಿಕ ನೀಡಿದ್ದ ಹೇಳಿಕೆ ವಿವಾದ ಸ್ವರೂಪ ಪಡೆದಿರುವ ಕುರಿತು ಕಪಿಲ್ ಶರ್ಮಾ ಪ್ರತಿಕ್ರಿಯೆ ನೀಡಿದರು.

  ‘‘ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕಾಗಿದೆ. ಪುಲ್ವಾಮ ರೀತಿಯ ದಾಳಿ ಹಾಗೂ ಹೋರಾಟ ನಡೆಯುತ್ತಿದ್ದರೂ ಮಾತುಕತೆ ಪ್ರಕ್ರಿಯೆ ಮುಂದುವರಿಯಬೇಕು. ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯವಿದೆ. ಅಂತಹ ಜನರಿಗೆ(ಉಗ್ರರಿಗೆ)ಧರ್ಮವಿಲ್ಲ, ದೇಶವಿಲ್ಲ ಹಾಗೂ ಜಾತಿಯೂ ಇಲ್ಲ’’ ಎಂದು ಸಿಧು ಹೇಳಿದ್ದರು. ಸಿಧು ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ತುತ್ತಾಗಿತ್ತು.

ಸಿಧು ಅವರನ್ನು ಕಪಿಲ್ ಶರ್ಮಾ ನಡೆಸಿಕೊಡುತ್ತಿರುವ ಟಿವಿ ಕಾರ್ಯಕ್ರಮದಿಂದ ನಿಷೇಧಿಸಬೇಕೆಂದು ಆಗ್ರಹ ವ್ಯಕ್ತವಾಗಿತ್ತು. ಸಿಧು ಅವರನ್ನು ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ ನಟಿ ಅರ್ಚನಾ ಪೂರನ್ ಸಿಂಗ್‌ರನ್ನು ಆಯ್ಕೆ ಮಾಡಲಾಗಿದೆ.

ಸಿಧು ವಿವಾದಾತ್ಮಕ ಹೇಳಿಕೆಗೆ ಕಪಿಲ್ ಶರ್ಮಾ ಪ್ರತಿ ಹೇಳಿಕೆ ನೀಡಿದ ಬಳಿಕ ಕಪಿಲ್‌ರನ್ನು ಟಿವಿ ಕಾರ್ಯಕ್ರಮದಿಂದ ಕೈಬಿಡಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News