ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಫಿಟ್ನೆಸ್ ಕಾಯ್ದುಕೊಳ್ಳುವತ್ತ ಗಮನ: ಪ್ರಣವ್

Update: 2019-02-20 18:48 GMT

ಹೊಸದಿಲ್ಲಿ, ಫೆ.20: ಕಳೆದ ಋತುವನ್ನು ಬಹುತೇಕ ಗಾಯದ ಸಮಸ್ಯೆಯೊಂದಿಗೆ ಕಳೆದಿರುವ ಭಾರತ ಟೆನಿಸ್‌ನ ಡಬಲ್ಸ್ ಪರಿಣತ ಆಟಗಾರ ಪ್ರಣವ್ ಚೋಪ್ರಾ ಉತ್ತಮ ಫಾರ್ಮ್‌ನೊಂದಿಗೆ ಮುಂಬರುವ ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳಿಗೆ ಮರಳುವ ಗುರಿ ಇಟ್ಟುಕೊಂಡಿದ್ದಾರೆ.

ಮೊದಲು ಡೆಂಗ್ ಸಮಸ್ಯೆಯಿಂದಾಗಿ ತಮ್ಮ ಎಲ್ಲ ಯೋಜನೆಗಳನ್ನು ಕಳೆದುಕೊಂಡಿದ್ದ 26 ವರ್ಷದ ಪ್ರಣವ್ ಆ ಬಳಿಕ ತಮ್ಮ ಎಲ್ಲ ಋತುವನ್ನು ಭುಜದ ನೋವಿನಿಂದ ಗುಣಮುಖರಾಗುವುದರಲ್ಲಿ ವ್ಯಯಿಸಿದ್ದರು.

ಕಳೆದ ವಾರ ಗುವಾಹಟಿಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿರಾಗ್ ಶೆಟ್ಟಿ ಜೊತೆಯಾಗಿ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಪಂಜಾಬ್ ಸಂಜಾತ ಚೋಪ್ರಾ ಹೊಸ ಶಕ್ತಿಯೊಂದನ್ನು ಪ್ರವಹಿಸಿಕೊಂಡಿದ್ದಾರೆ.

‘‘ಸೀನಿಯರ್ ವಿಭಾಗದಲ್ಲಿ ದೊರೆತ ಪ್ರಶಸ್ತಿಯು ತನಗೆ ದೈಹಿಕ ಹಾಗೂ ಮಾನಸಿಕವಾಗಿ ಬಹಳಷ್ಟು ಅನುಕೂಲವಾಯಿತು. ಎಪ್ರಿಲ್ ಅಂತ್ಯದಲ್ಲಿ ಆರಂಭವಾಗುವ ಒಲಿಂಪಿಕ್ ಅರ್ಹತಾ ಟೂರ್ನಿಗಳಿಗೂ ಮೊದಲು ಪೂರ್ಣಪ್ರಮಾಣದ ಫಿಟ್ನೆಸ್‌ಗೆ ಮರಳುವುದು ನನ್ನ ಆದ್ಯತೆಯಾಗಿದೆ’’ ಎಂದು ಚೋಪ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News