ಎದುರಿಸಿದ ಮೊದಲ ಎಸೆತದಲ್ಲಿ ಮೊದಲ ಬಾರಿ ಔಟಾದ ಅಮ್ಲ!

Update: 2019-02-22 19:02 GMT

ಡರ್ಬನ್, ಫೆ.22: ಶ್ರೀಲಂಕಾ ವೇಗದ ಬೌಲರ್ ವಿಶ್ವ ಫೆರ್ನಾಂಡೊ ಗುರುವಾರ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರವಾಗಿದ್ದಾರೆ. ದ.ಆಫ್ರಿಕ ವಿರುದ್ಧ ಪೋರ್ಟ್ ಎಲಿಝಬೆತ್‌ನಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಕೊನೆಯ ಟೆಸ್ಟ್ ನಲ್ಲಿ ಫೆರ್ನಾಂಡೊ ಅವರು ದ. ಆಫ್ರಿಕದ ಡೀನ್ ಎಲ್ಗರ್, ಹಾಶಿಮ್ ಅಮ್ಲ ಹಾಗೂ ಡ್ಯುವಾನ್ ಒಲಿವಿಯರ್ ವಿಕೆಟ್ ಪಡೆದು ಮಿಂಚಿದರು.

 ಈ ವೇಳೆ ಅವರು ‘ಪ್ರಥಮ’ವೊಂದನ್ನು ಸಾಧಿಸಿದರು. ಈ ಇನಿಂಗ್ಸ್‌ನಲ್ಲಿ ಅಮ್ಲ ತಾನೆದುರಿಸಿದ ಮೊದಲ ಎಸೆತದಲ್ಲಿಯೇ ಮೊದಲ ಬಾರಿಗೆ ಔಟಾಗುವ ಮೂಲಕ ಫೆರ್ನಾಂಡೊಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಫೆರ್ನಾಂಡೊ, ಅಮ್ಲ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ‘ಗೋಲ್ಡನ್ ಡಕ್’ಗೆ ಔಟ್ ಮಾಡಿದ ವಿಶೇಷ ಸಾಧನೆಗೆ ಪಾತ್ರವಾದರು. ಅಚ್ಚರಿಯೆಂದರೆ ಅಮ್ಲ ಅವರನ್ನು ಶೂನ್ಯಕ್ಕೆ ಔಟ್ ಮಾಡಲು ಬೌಲರ್‌ಗಳಿಗೆ 124 ಟೆಸ್ಟ್‌ಗಳು ಬೇಕಾದವು. ಕಸುನ್ ರಂಜಿತ ಹಾಗೂ ಫೆರ್ನಾಂಡೊ ಗಳಿಸಿದ ತಲಾ ಮೂರು ವಿಕೆಟ್‌ಗಳ ನೆರವಿನಿಂದ ಪ್ರವಾಸಿಗರು ದ.ಆಫ್ರಿಕವನ್ನು ಪ್ರಥಮ ಇನಿಂಗ್ಸ್‌ನಲ್ಲಿ 200ಕ್ಕೆ ನಿಯಂತ್ರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News