ದೋಹಾ: ಐಸಿಬಿಎಫ್ ಪ್ರತಿನಿಧಿಯಿಂದ ಐಶ್ವರ್ಯಾ ರೈ ಭೇಟಿ

Update: 2019-02-23 05:31 GMT

ಕತರ್, ಫೆ.23: ಇತ್ತೀಚೆಗೆ ದೋಹಾಕ್ಕೆ ಆಗಮಿಸಿದ್ದ ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈಯವರನ್ನು ಕನ್ನಡಿಗರ ಪ್ರತಿನಿಧಿಯಾಗಿ ಭಾರತೀಯ ಸಮುದಾಯದ ಹಿತನಿಧಿ ಸಂಘ(ಐಸಿಬಿಎಫ್)ದ ಸಹ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಬ್ಬಾಗಿಲು ಭೇಟಿಯಾಗಿ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.

ಈ ಸಂದರ್ಭ ಐಸಿಬಿಎಫ್ ಕೈಗೊಳ್ಳುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ಮೂಲದ ನಟಿ ಸುಬ್ರಹ್ಮಣ್ಯರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News