ಆಸ್ಕರ್ ಪ್ರಶಸ್ತಿ ಪ್ರದಾನ: ಯಾವ ಚಿತ್ರಕ್ಕೆ ಅಗ್ರಪಟ್ಟ ?

Update: 2019-02-25 04:47 GMT

ಲಾಸ್‌ಎಂಜಲೀಸ್, ಫೆ. 25: ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದ "ಗ್ರೀನ್ ಬುಕ್" ಚಿತ್ರ ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೋಮಾ ಹಾಗೂ ದ ಫೇವರಿಟ್ ಚಿತ್ರಗಳನ್ನು ಹಿಂದಿಕ್ಕಿ ಗ್ರೀನ್ ಬುಕ್ ತೀರ್ಪುಗಾರರ ಮನ ಗೆದ್ದಿದೆ.

ಜ್ಯೂಲಿಯಾ ರಾಬರ್ಟ್ ಅವರು ಶ್ರೇಷ್ಠ ಚಿತ್ರ ಪ್ರಶಸ್ತಿ ಪ್ರದಾನ ಮಾಡಿದರು. ಹತ್ತು ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿರುವ ರೋಮಾ ಚಿತ್ರದ ನಿರ್ದೇಶಕ ಅಲ್ಫೋನ್ಸೊ ಕೌರನ್ ಶ್ರೇಷ್ಠ ಚಿತ್ರ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದ ಫೇವರಿಟ್ ಚಿತ್ರದ ನಾಯಕ ನಟಿ ಒಲಿವಿಯಾ ಕೋಲ್‌ಮನ್ ಶ್ರೇಷ್ಠ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೊಹೆಮಿನ್ ರಪ್ಸೊಡಿ ಚಿತ್ರದ ನಟನೆಗಾಗಿ ರಮಿ ಮಲೆಕ್ ಶ್ರೇಷ್ಠ ನಟ ಗೌರವಕ್ಕೆ ಪಾತ್ರರಾಗಿದ್ದಾರೆ.

ಚಿತ್ರರಂಗದ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಡೊಲ್ಬಿ ಥಿಯೇಟರ್‌ನಲ್ಲಿ ಆರಂಭವಾಗಿದ್ದು, ಹಲವು ಅಚ್ಚರಿಗಳಿಗೆ ಈ ಬಾರಿಯ ಪ್ರಶಸ್ತಿಗಳು ಕಾರಣವಾಗಿವೆ. 91ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಾರಾ ನಿರೂಪಕರು ಇಲ್ಲದಿರುವುದು ಕೂಡಾ ನಾಲ್ಕು ದಶಕಗಳಲ್ಲಿ ಇದೇ ಮೊದಲು.

ಕಪ್ಪು- ಬಿಳುವು ಅರೆ ಆತ್ಮಚರಿತ್ರಾ ಕಥಾನಕ ರೋಮಾ ಮತ್ತು ಯೊರ್ಗೋಸ್ ಲಂತಿಮೋಸ್ ಅವರ ದ ಫೇವರಿಟ್ ಗರಿಷ್ಠ ಅಂದರೆ ತಲಾ 10 ಪ್ರಶಸ್ತಿಗಳಿಗೆ ನಾಮನಿರ್ದೇಶನ ಹೊಂದಿದ್ದವು.

ಪ್ರಶಸ್ತಿ ವಿವರ

ಶ್ರೇಷ್ಠ ಅನಿಮೇಟೆಡ್ ಕಿರುಚಿತ್ರ- ಪಿಕ್ಸರ್ ಅವರ ಬಾವೊ
ಶ್ರೇಷ್ಠ ಅನಿಮೇಟೆಡ್ ಫೀಚರ್‌ಫಿಲ್ಮ್- ಸ್ಪೈಡರ್‌ ಮ್ಯಾನ್
ಶ್ರೇಷ್ಠ ಪೋಷಕ ನಟ: ಮಹರ್ಷಲಾ ಅಲಿ
ಶ್ರೇಷ್ಠ ಸಂಕಲನ: ಬೊಹೆಮಿನ್ ರಪ್ಸೊಡಿ
ಶ್ರೇಷ್ಠ ವಿದೇಶಿ ಭಾಷಾ ಚಿತ್ರ: ಅಲ್ಫೋನ್ಸಾ ಕೌರನ್ ಅವರ ರೋಮಾ
ಶ್ರೇಷ್ಠ ಧ್ವನಿ ಸಂಕಲನ, ಧ್ವನಿ ಮಿಶ್ರಣ: ಬೆಹೊಮಿನ್ ರೊಪ್ಸೊಡಿ ಚಿತ್ರಕ್ಕಾಗಿ ಜಾನ್ ವರಸ್ಟ್ ಮತ್ತು ನೀನಾ ಹಾರ್ಟ್‌ಸ್ಟೋನ್.
ಶ್ರೇಷ್ಠ ವಿಷುವಲ್ ಎಫೆಕ್ಟ್: ಫಸ್ಟ್‌ಮ್ಯಾನ್ ಚಿತ್ರಕ್ಕಾಗಿ ಪಾಲ್ ಲ್ಯಾಂಬರ್ಟ್, ಇಯಾನ್ ಹಂಟರ್, ತ್ರಿಸ್ತನ್ ಮೈಲ್ಸ್ ಮತ್ತು ಜೆ.ಡಿ.ಶೆವಾಲ್ಮ್
ಶ್ರೇಷ್ಠ ಸಾಕ್ಷ್ಯಚಿತ್ರ: ಪಿರೇಡ್, ಎಂಡ್ ಆಫ್ ಸೆಂಟೆನ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News