ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ: 8.72 ಲಕ್ಷ ನಗದು, 1026 ಆರ್‌ಸಿ ಕಾರ್ಡ್ ಜಪ್ತಿ

Update: 2019-02-27 15:35 GMT

ಬೆಂಗಳೂರು, ಫೆ.27: ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಸಂಬಂಧ ದೂರು ಕೇಳಿಬಂದ ಹಿನ್ನಲೆ ಎಸಿಬಿ ತನಿಖಾಧಿಕಾರಿಗಳು, ಇಲ್ಲಿನ ರಾಜಾಜಿನಗರ ಆರ್‌ಟಿಒ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ, 8.72 ಲಕ್ಷ ನಗದು, 1026 ಆರ್‌ಸಿ ಸ್ಮಾರ್ಟ್ ಕಾರ್ಡ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ಎಸಿಬಿ ತನಿಖಾಧಿಕಾರಿಗಳು, ರಾಜಾಜಿನಗರದ ಆರ್‌ಟಿಒ ಕಚೇರಿ ಮೇಲೆ ಮಾತ್ರವಲ್ಲದೆ, ಅದರ ವ್ಯಾಪ್ತಿಯಲ್ಲಿ ಬರೋಬ್ಬರಿ 14 ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಈ ವೇಳೆ ಅಂಗಡಿಗಳಲ್ಲಿ 8.72 ಲಕ್ಷ ನಗದು, 8 ಆರ್‌ಟಿಒ ಕಚೇರಿಯ ಅಧಿಕೃತ ಮೊಹರು, 1026 ಆರ್‌ಸಿ ಸ್ಮಾರ್ಟ್ ಕಾರ್ಡ್, 1523 ಲಘು ವಾಹನ ಚಾಲನಾ ಪರವಾನಿಗೆ ಕಾರ್ಡ್‌ಗಳು, 19 ಎಫ್‌ಸಿ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ.

ಈ ಸಂಬಂಧ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಅಧಿಕೃತ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News