ಕೆಎರ್ಸ್ಸಾಟಿಸಿ ಅಧ್ಯಕ್ಷರಾಗಿ ಬಿ.ಸತ್ಯನಾರಾಯಣ ಅಧಿಕಾರ ಸ್ವೀಕಾರ
ಬೆಂಗಳೂರು, ಫೆ.28: ಶಿರಾ ವಿಧಾನಸಭಾ ಕ್ಷೇತ್ರದ ಬಿ.ಸತ್ಯನಾರಾಯಣ ಕೆರ್ಸ್ಸಾಟಿಸಿಯ ಅಧ್ಯಕ್ಷರಾಗಿ ಗುರುವಾರ ಕೆಎರ್ಸ್ಸಾಟಿಸಿಯ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಸಂಸ್ಥೆಯ ನಿರ್ದೇಶಕರುಗಳು ಹಾಗೂ ಇಲಾಖಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬೃಹತ್ ಸಂಸ್ಥೆಯಾದ ಕೆಎರ್ಸ್ಸಾಟಿಸಿಗೆ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ನಾವೆಲ್ಲರೂ ಒಂದು ತಂಡದ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸೇವೆಯೇ ನಮ್ಮ ಗುರಿಯಾಗಿರಬೇಕು. ಅಧ್ಯಕ್ಷ, ಅಧಿಕಾರಿ, ನೌಕರ ಎಂಬ ಭಾವನೆ ಇರಬಾರದು, ನಾವೆಲ್ಲರೂ ಒಂದೇ, ಜನರಿಗೆ ಸಮರ್ಪಕ ಸೇವೆ ಒದಗಿಸುವುದು ನಮ್ಮ ಪ್ರಥಮ ಆದ್ಯತೆ ಎಂಬುದನ್ನು ಮನಗಂಡು ಎಲ್ಲರೂ ಸೌಹಾರ್ದಯುತ ವಾತಾವರಣದಲ್ಲಿ ಕೆಲಸ ಮಾಡಿ ಈ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಕೊಂಡ್ಯೊಯಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕೆಎರ್ಸ್ಸಾಟಿಸಿ ಬಸ್ಸುಗಳೇ ಜನರ ಜೀವನಾಡಿಯಾಗಿದ್ದು, ಅಲ್ಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರೊಂದಿಗೆ, ಸರ್ವರಿಗೂ ಸಾರಿಗೆ ಸೇವೆ ನೀಡಲು ಬದ್ದನಾಗಿ, ನಾನು ನಿಮ್ಮಲ್ಲಿ ಒಬ್ಬನಾಗಿ, ಕೆಲಸ ಮಾಡುವ ಆಶಯ ಹೊಂದಿರುವುದಾಗಿ ತಿಳಿಸಿದರು.