×
Ad

ಬೆಂಗಳೂರು: ಹೊರಾಂಗಣ ಜಿಮ್‌ಗೆ ಶಾಸಕಿ ಸೌಮ್ಯ ರೆಡ್ಡಿ ಚಾಲನೆ

Update: 2019-02-28 22:37 IST

ಬೆಂಗಳೂರು, ಫೆ 28: ಜಯನಗದಲ್ಲಿ ಹಿರಿಯ ನಾಗರಿಕರು ಮತ್ತು ಜನ ಸಾಮಾನ್ಯರಿಗಾಗಿ ನಿರ್ಮಿಸಲಾಗಿರುವ ಹೊರಾಂಗಣ ಜಿಮ್‌ಗೆ ಜಯನಗರ ವಿಧಾನಸಭಾ ಶಾಸಕಿ ಸೌಮ್ಯ ರೆಡ್ಡಿ ಚಾಲನೆ ನೀಡಿದ್ದಾರೆ.

ನಂತರ ಮಾತನಾಡಿದ ಅವರು, ಸದೃಢವಾದ ದೇಹ ಇದ್ದರೆ ಉತ್ತಮವಾದ ಮನಸ್ಸಿರುತ್ತದೆ. ದೇಹ ಮತ್ತು ಮನಸ್ಸು ಗಟ್ಟಿಯಾಗಿದ್ದರೆ ಮನುಷ್ಯರಲ್ಲಿ ಒಳ್ಳೆಯ ಧ್ಯೇಯ ಬೆಳೆಯುತ್ತದೆ. ವ್ಯಾಯಾಮ ಮತ್ತು ಕ್ರೀಡೆಯಿಂದ ದೈಹಿಕ ಕ್ಷಮತೆ ಹೊಂದಲು ಸಾಧ್ಯ ಎಂದು ಹೇಳಿದರು.

ಆರೋಗ್ಯವಂತ ವ್ಯಕ್ತಿಗಳು ಆಯಾ ಕುಟುಂಬ ಮತ್ತು ಸಮಾಜಕ್ಕೆ ಆಸ್ತಿಯಾಗುತ್ತಾರೆ. ಹೀಗಾಗಿ ಆರೋಗ್ಯ ಪೂರ್ಣ ಬದುಕು ಸಾಗಿಸಲು ಹಿರಿಯ ನಾಗರಿಕರು, ಯುವ ಸಮೂಹ ದೈಹಿಕ ಕಸರತ್ತಿಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

ಹಿರಿಯ ನಾಗರಿಕರು ಕನಿಷ್ಠ ಅರ್ದಗಂಟೆ ಕಾಲ ನಡಿಗೆ ಮತ್ತು ವ್ಯಾಯಾಮ ಮಾಡಿದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು. ವ್ಯಾಜ್ಯ ಮುಕ್ತ ಮತ್ತು ರೋಗ ಮುಕ್ತ ಜಯನಗರ ನಿರ್ಮಿಸುವುದು ತಮ್ಮ ಮಹತ್ವಾಕಾಂಕ್ಷೆಯ ಗುರಿಯಾಗಿದೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಹೇಳಿದರು.

ಸ್ಥಳೀಯ ಪಾಲಿಕೆ ಸದಸ್ಯ ಎನ್.ನಾಗರಾಜು ಮಾತನಾಡಿ, ವಾರ್ಡ್‌ನಲ್ಲಿ 4.75 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇಡೀ ಬೆಂಗಳೂರಿನಲ್ಲಿ ಭೈರಸಂದ್ರ ವಾರ್ಡ್ ಅನ್ನು ಮಾದರಿ ವಾರ್ಡ್ ಆಗಿ ಅಭಿವೃದ್ಧಿಗೊಳಿಸುವುದು ನಮ್ಮ ಗುರಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News