ಶ್ರೀಲಂಕಾದ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ

Update: 2019-03-02 18:45 GMT

1575: ತುಕರೋಯ್ ಕದನದಲ್ಲಿ ಮೊಗಲ್ ವಂಶದ ಪ್ರಸಿದ್ಧ ದೊರೆ ಅಕ್ಬರ್ ಬಂಗಾಳದ ಸೈನ್ಯವನ್ನು ಸೋಲಿಸಿದನು.

1857: ಎರಡನೇ ಅಪೀಮು ಯುದ್ಧದ ಭಾಗವಾಗಿ ಫ್ರಾನ್ಸ್ ಹಾಗೂ ಇಂಗ್ಲೆಂಡ್ ಚೀನಾದ ಮೇಲೆ ಯುದ್ಧ ಘೋಷಿಸಿದವು.

1939: ಭಾರತದಲ್ಲಿ ಬ್ರಿಟಿಷರ ನಿರಂಕುಶ ಆಡಳಿತವನ್ನು ವಿರೋಧಿಸಿ ಮಹಾತ್ಮಾ ಗಾಂಧೀಜಿ ಮುಂಬೈನಲ್ಲಿ ಉಪವಾಸ ಆರಂಭಿಸಿದರು.

1943: ಬ್ಯಾಟಲ್ ಆಫ್ ಬೀಸ್ಮಾರ್ಕ್ ಸೀ ನಲ್ಲಿ ಆಸ್ಟ್ರೇಲಿಯ ಹಾಗೂ ಅಮೆರಿಕ ವಾಯುಸೇನೆಗಳು ಜಪಾನ್‌ನ ನೌಕಾಸೇನೆಯ ಬೆಂಗಾವಲು ಪಡೆಯನ್ನು ಸೋಲಿಸಿದವು.

1974: ಟರ್ಕಿಶ್ ಏರ್‌ಲೈನ್ಸ್‌ನ ಡಿಸಿ10 ಹೆಸರಿನ ವಿಮಾನವು ಲಂಡನ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪ್ಯಾರಿಸ್ ಬಳಿ ಪತನಗೊಂಡಿತು. ಈ ವೇಳೆ ವಿಮಾನದಲ್ಲಿದ್ದ 345 ಜನ ಪ್ರಯಾಣಿಕರು ಪ್ರಾಣ ಕಳೆದುಕೊಂಡರು.

1992: ಟರ್ಕಿಯ ರೆಂಗುಲ್ಡಕ್ ಎಂಬಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಇಂಧನ ಅನಿಲ ಸ್ಫೋಟಗೊಂಡು 263 ಜನ ಮೃತಪಟ್ಟ ವರದಿಯಾಗಿದೆ.

2002: ಸ್ವಿಟ್ಜರ್ಲೆಂಡ್ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು.

2009: ಶ್ರೀಲಂಕಾದ ಕ್ರಿಕೆಟ್ ತಂಡ ಈ ದಿನ ಉಗ್ರರ ದಾಳಿ ಎದುರಿಸಬೇಕಾಯಿತು. ಪಾಕಿಸ್ತಾನದ ವಿರುದ್ಧದ ಪಂದ್ಯವಾಡಲು ಲಾಹೋರ್‌ನ ಗದ್ದಾಫಿ ಸ್ಟೇಡಿಯಂಗೆ ತೆರಳುತ್ತಿದ್ದ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್ ಮೇಲೆ 12 ಬಂದೂಕುಧಾರಿಗಳು ಗುಂಡಿನ ಮಳೆಗರೆದರು. ಈ ಸಂದರ್ಭದಲ್ಲಿ 6 ಪಾಕಿಸ್ತಾನಿ ಯೋಧರು, ಇಬ್ಬರು ನಾಗರಿಕರು ಮೃತಪಟ್ಟರೆ ಲಂಕಾದ 6 ಕ್ರಿಕೆಟಿಗರು ಗಾಯಗೊಂಡರು.

2013: ಪಾಕಿಸ್ತಾನದ ಕರಾಚಿಯಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಫೋಟದಲ್ಲಿ 45 ಜನ ಅಸುನೀಗಿದರು.

1967: ಖ್ಯಾತ ಸಂಗೀತ ಸಂಯೋಜಕ ಹಾಗೂ ಹಿನ್ನೆಲೆ ಗಾಯಕ ಶಂಕರ್ ಮಹಾದೇವನ್ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ