ಸ್ವಾತಂತ್ರ್ಯ ಹೋರಾಟದ ವೇಳೆ ಅಡಗಿ ಕೂತ ಬಿಜೆಪಿಗೆ ದೇಶಭಕ್ತಿಯ ಪ್ರಮಾಣಪತ್ರ ನೀಡುವ ಹಕ್ಕಿಲ್ಲ: ಡೆರಿಕ್ ಓಬ್ರಿಯಾನ್

Update: 2019-03-03 17:14 GMT

ಕೋಲ್ಕತಾ, ಮಾ. 3: ಸೇನಾ ಪಡೆ ಭಾರತಕ್ಕೆ ಸೇರಿರುವುದು ನರೇಂದ್ರ ಮೋದಿ, ಅಮಿತ್ ಶಾ ಅಥವಾ ಬಿಜೆಪಿಗೆ ಸೇರಿರುವುದು ಅಲ್ಲ ಎಂದು ತೃಣಮೂಲ ಕಾಂಗ್ರೆಸ್‌ನ ನಾಯಕ ಡೆರಿಕ್ ಒಬ್ರಿಯಾನ್ ಹೇಳಿದ್ದಾರೆ.

ಅಮಿತ್ ಶಾ ಹಾಗೂ ಬಿಜೆಪಿ ವಿಭಜನೀಯ ಹಾಗೂ ದ್ವೇಷ ರಾಜಕಾರಣದ ಕೊಳಕು ಪ್ರತಿಪಾದಕರು. ದೇಶಭಕ್ತಿ ಬಗ್ಗೆ ಅವರ ಭಾಷಣವನ್ನು ನಾವು ಕೇಳಲಾರೆವು. ನಮ್ಮ ಸೇನಾ ಪಡೆ ಭಾರತಕ್ಕೆ ಸೇರಿರುವುದು. ಮೋದಿ-ಶಾ-ಬಿಜೆಪಿಗೆ ಸೇರಿದ್ದಲ್ಲ ಎಂದು ಡೆರಿಕ್ ಟ್ವೀಟ್ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸಂದರ್ಭ ಅಡಗಿ ಕುಳಿತ ಬಿಜೆಪಿ ದೇಶಭಕ್ತಿ ಪ್ರಮಾಣಪತ್ರ ನೀಡುವ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭ ಅಡಗಿ ಕುಳಿತ ಖಾಕಿ ಚಡ್ಡಿ ಧರಿಸಿದ ವ್ಯಕ್ತಿಗಳು ಈಗ ರಾಷ್ಟ್ರಭಕ್ತಿಯ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News