ವನಿತೆಯರ ಟ್ವೆಂಟಿ-20: ಕೊನೆಯ ಓವರ್‌ನಲ್ಲಿ 1 ರನ್‌ನಿಂದ ಸೋತ ಭಾರತ

Update: 2019-03-09 09:24 GMT
ಸ್ಮತಿ ಮಂಧಾನಾ

ಗುವಾಹಟಿ, ಮಾ.9: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಗೆಲ್ಲಲು ಸುಲಭ ಸವಾಲು ಪಡೆದಿದ್ದರೂ ಕೊನೆಯ ಓವರ್‌ನಲ್ಲಿ ಎಡವಿ ಕೇವಲ 1 ರನ್‌ನಿಂದ ಸೋಲುಂಡಿದೆ. ಈ ಮೂಲಕ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡು ಮುಖಭಂಗ ಅನುಭವಿಸಿದೆ.

ಇಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವನ್ನು ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 119 ರನ್‌ಗೆ ನಿಯಂತ್ರಿಸಲು ಶಕ್ತವಾಗಿತ್ತು. ಗೆಲ್ಲಲು 120 ರನ್ ಗುರಿ ಪಡೆದ ಭಾರತ ತಂಡಕ್ಕೆ ಕೊನೆಯ ಓವರ್‌ನಲ್ಲಿ 3 ರನ್ ಅಗತ್ಯವಿತ್ತು. 20ನೇ ಓವರ್ ಬೌಲಿಂಗ್ ಮಾಡಿದ ಕಾಟೆ ಕ್ರಾಸ್ ಮೊದಲ 3 ಎಸೆತಗಳಲ್ಲಿ ರನ್ ಬಿಟ್ಟುಕೊಡಲಿಲ್ಲ. 4 ಹಾಗೂ 5ನೇ ಎಸೆತದಲ್ಲಿ ವಿಕೆಟ್ ಪಡೆದ ಕಾಟೆ ಕೊನೆಯ ಎಸೆತದಲ್ಲಿ 1 ರನ್ ಬಿಟ್ಟುಕೊಟ್ಟರು. ಇದರೊಂದಿಗೆ ಇಂಗ್ಲೆಂಡ್‌ಗೆ 1 ರನ್ ರೋಚಕ ಗೆಲುವು ತಂದರು.

ಮಾಜಿ ನಾಯಕಿ ಮಿಥಾಲಿ ರಾಜ್ ಔಟಾಗದೆ 30 ರನ್(32 ಎಸೆತ, 4 ಬೌಂಡರಿ) ಹಾಗೂ ನಾಯಕಿ ಸ್ಮತಿ ಮಂಧಾನಾ(58,39 ಎಸೆತ, 8 ಬೌಂಡರಿ, 1 ಸಿಕ್ಸರ್) ಟಿ-20 ಕ್ರಿಕೆಟ್‌ನಲ್ಲಿ 9ನೇ ಅರ್ಧಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News