ಜೂಜಾಟ ಕ್ಲಬ್ ಮೇಲೆ ಸಿಸಿಬಿ ದಾಳಿ: 32 ಜನರ ಬಂಧನ, ನಗದು ಜಪ್ತಿ

Update: 2019-03-11 14:58 GMT

ಬೆಂಗಳೂರು, ಮಾ.11: ಕಾನೂನು ಬಾಹಿರ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದಡಿ ಕ್ಲಬ್‌ವೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 32 ಜನರನ್ನು ಬಂಧಿಸಿ, 1.52 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಯಲಹಂಕದ ಬಿಬಿ ರಸ್ತೆಯ ಜಿ.ಎನ್.ಆರ್.ಟಿ.ಮ್ಯಾನ್‌ಸನ್, 3ನೇ ಮಹಡಿಯಲ್ಲಿ ರೆಡ್‌ಮೌಂಟ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ನ್ಯಾಯಾಲಯದ ಕಾನೂನು ಉಲ್ಲಂಘಿಸಿ ಸದಸ್ಯರಲ್ಲದ ಕೆಲವು ಜನ ಆಸಾಮಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ,

ಬಂಧಿತರಿಂದ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 1.52 ಲಕ್ಷ ನಗದು, ಇಸ್ಪೀಟ್ ಎಲೆಗಳು ವಶಪಡಿಸಿಕೊಂಡಿದ್ದು, ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News