ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾದಕ ಹಣೆಪಟ್ಟಿಗೆ ಸೇರಿಸಲು ಚೀನಾ 4ನೇ ಬಾರಿ ಅಡ್ಡಿ

Update: 2019-03-14 04:48 GMT

ನ್ಯೂಯಾರ್ಕ್, ಮಾ.14: ಪಾಕಿಸ್ತಾನ ಮೂಲದ ಜೈಶ್ ಇ ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನ ನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ನಿರ್ಧಾರಕ್ಕೆ ಚೀನಾ ಮತ್ತೊಮ್ಮೆ ಅಡ್ಡಿಪಡಿಸಿದೆ.

ಇದರೊಂದಿಗೆ ಚೀನಾ ನಾಲ್ಕನೇ ಬಾರಿ ಮಸೂದ್ ಅಝರ್ ನ ವಿಚಾರದಲ್ಲಿ ತನ್ನ ಕ್ಯಾತೆ ತೆಗೆದಿದೆ.

 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಸೂದ್ ಅಝರ್ ನನ್ನು  ಜಾಗತಿಕ ಭಯೋತ್ಪಾದಕ ಘೋಷಿಸುವ ಪ್ರಸ್ತಾವವನ್ನು ಅಂಗೀಕರಿಸುವ ಸ್ವಲ್ಪ ಹೊತ್ತಿನ ಮೊದಲು ಚೀನಾ ತಕರಾರು ಎತ್ತಿದ್ದು, ಎಲ್ಲರೂ ಒಪ್ಪಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರಿಂದ ಸಮಸ್ಯೆ ಪರಿಹಾರವಾಗದಿದ್ದರೆ ಈ ನಿರ್ಣಯ  ಕೈಗೊಂಡು ಏನು ಪ್ರಯೋಜನ ಎಂದು ಚೀನಾ ಪ್ರಶ್ನಿಸಿದೆ.

ಚೀನಾದ ನಿಲುವಿನ ಹಿನ್ನೆಲೆಯಲ್ಲಿ ಮಸೂದ್ ಅಝರ್ ನನ್ನು   ಜಾಗತಿಕ ಭಯೋತ್ಪಾದಕ ಹಣೆಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಮತ್ತೊಮ್ಮೆ ಅಡ್ಡಿ ಉಂಟಾಗಿದೆ.

ಫುಲ್ವಾಮಾದಲ್ಲಿ ಫೆ.14ರಂದು ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಜೈಶ್ ಇ ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನ ನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಪ್ರಸ್ತಾವವನ್ನು ಬ್ರಿಟನ್  ಮತ್ತು ಅಮೆರಿಕದ ಬೆಂಬಲದೊಂದಿಗೆ ಫ್ರಾನ್ಸ್ ದೇಶ  ಭದ್ರತಾ ಮಂಡಳಿಯ ಸಭೆಯ ಮುಂದಿರಿಸಿತ್ತು. ಬಹುತೇಕ ದೇಶಗಳು ಈ ಪ್ರಸ್ತಾವನೆಗೆ ಬೆಂಬಲ ವ್ಯಕ್ತಪಡಿಸಿದ್ದರೂ ಚೀನಾ ಕೊನೆಗಳಿಗೆಯಲ್ಲಿ   ತನ್ನ ತಕರಾರು ಎತ್ತಿದೆ. ಈ ಹಿಂದೆ ಮೂರು ಬಾರಿ ಚೀನಾ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News