ನ್ಯೂಝಿಲೆಂಡ್ ಶೂಟೌಟ್: 15 ನಿಮಿಷಗಳ ಕಾಲ ದಾಳಿಯನ್ನು ನೇರ ಪ್ರಸಾರ ಮಾಡಿದ್ದ ದುಷ್ಕರ್ಮಿ

Update: 2019-03-15 07:12 GMT

ಕ್ರೈಸ್ಟ್ ಚರ್ಚ್: ನ್ಯೂಝಿಲೆಂಡಿನ ಕ್ರೈಸ್ಟ್ ಚರ್ಚ್ ನಗರದ ಮಸೀದಿಯಲ್ಲಿ ನಡೆದ ಶೂಟೌಟ್  ಘಟನಾವಳಿಯನ್ನು ದಾಳಿಕೋರ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ಮೂಲಕ ಹರಿಯ ಬಿಟ್ಟಿದ್ದನೆಂದು ತಿಳಿದು ಬಂದಿದೆ.

ಬಂದೂಕುಧಾರಿ ಮಸೀದಿ ತನಕ ಕಾರ್ ನಲ್ಲಿ ಬಂದು ಅಲ್ಲಿ ತನ್ನ ಕಾರನ್ನು ಪಾರ್ಕ್ ಮಾಡುವುದರಿಂದ ನೇರ ಪ್ರಸಾರ ಆರಂಭಗೊಂಡಿತ್ತು. ಆತನ ಸ್ಟೇಶನ್ ವ್ಯಾಗನ್ ವಾಹನದ ಎದುರಿನ ಸೀಟಿನಲ್ಲಿ ಹಲವಾರು ಶಸ್ತ್ರಗಳಿದ್ದವಲ್ಲದೆ ಪೆಟ್ರೋಲ್ ಬಾಟಲಿಗಳೂ ಇದ್ದವೆಂದು ನ್ಯೂಝಿಲೆಂಡಿನ ಪತ್ರಿಕೆಯೊಂದು ವರದಿ ಮಾಡಿದೆ.

ಅತ ನಂತರ ಶಸ್ತ್ರಸಜ್ಜಿತನಾಗಿ ಮಸೀದಿಯೊಳಗೆ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದು ನೇರ ಪ್ರಸಾರ ಸುಮಾರು 15 ನಿಮಿಷಗಳ ಕಾಲ ನಡೆದಿತ್ತು. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡದಂತೆ ನ್ಯೂಝಿಲೆಂಡ್ ಪೊಲೀಸರು ವಿನಂತಿಸಿದ್ದಾರೆ.

ಬಂದೂಕುಧಾರಿ ಮಿಲಿಟರಿ ಸಿಬ್ಬಂದಿಯಂತೆಯೇ ಸಮವಸ್ತ್ರ ಧರಿಸಿದ್ದನ್ನಲ್ಲದೆ ಕೈಯ್ಯಲ್ಲಿ ಸ್ವಯಂಚಾಲಿತ ಬಂದೂಕು ಹಿಡಿದುಕೊಂಡು ಅಲ್ ನೂರ್ ಮಸೀದಿಯಲ್ಲಿದ್ದವರತ್ತ ಗುಂಡು ಹಾರಿಸಲು ಆರಂಭಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News