ಮೀಸಲು ಇವಿಎಂ, ವಿವಿಪ್ಯಾಟ್ ಯಂತ್ರಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಕಡ್ಡಾಯ

Update: 2019-03-15 12:10 GMT

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಳಿಗಾಗಿ ಮೀಸಲು ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಕೊಂಡು ಹೋಗುವ  ವಾಹನಗಳಿಗೂ ಕಡ್ಡಾಯವಾಗಿ ಜಿಪಿಎಸ್ ಆಳವಡಿಸಬೇಕಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಳೆದ ವರ್ಷ ಐದು ರಾಜ್ಯಗಳ ವಿಧಾನಸಭಾ ಚುಣಾವಣೆಯ ಸಂದರ್ಭ ಇವಿಎಂಗಳು ಹಾಗೂ ವಿವಿಪ್ಯಾಟ್ ಯಂತ್ರಗಳು ಹೋಟೆಲ್ ಗಳು, ರಸ್ತೆಗಳು ಹಾಗೂ ಶಾಸಕರೊಬ್ಬರ ನಿವಾಸದಲ್ಲಿಯೂ ಪತ್ತೆಯಾದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ.

ಎಲ್ಲಾ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಸಾಗಿಸುವ ವಾಹನಗಳ ಸಂಪೂರ್ಣ ಓಡಾಟದ ಮೇಲೆ ಕಣ್ಣಿಡಬೇಕೆಂದು ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ. ಈ ಇವಿಎಂ ಯಂತ್ರಗಳನ್ನು ಸಾಗಿಸುವ ಎಲ್ಲಾ ಸೆಕ್ಟರ್ ಅಧಿಕಾರಿಗಳ ವಾಹನಗಳಲ್ಲಿ ಜಿಪಿಎಸ್ ಅಳವಡಿಸಬೇಕು ಎಂದು ಆಯೋಗ ತಿಳಿಸಿದೆ.

ಈ ಹಿಂದೆ ಇವಿಎಂಗಳ ನಾಪತ್ತೆ ಪ್ರಕರಣಗಳು ನಡೆದಾಗ ಹೆಚ್ಚಿನ ಸಂದರ್ಭಗಳಲ್ಲಿ ಚುನಾವಣಾ ಸಿಬ್ಬಂದಿಯ ಬೇಜವಾಬ್ದಾರಿಯಿಂದಲೇ ಇಂತಹ ಘಟನೆ ಸಂಭವಿಸಿದೆಯೆಂದು ಆಯೋಗ ಕಂಡುಕೊಂಡಿದೆ.

ಈ ಬಾರಿಯ ಚುಣಾವಣೆಗೆ ದೇಶಾದ್ಯಂತ 10.35 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕಳೆದ ಬಾರಿ 9.28 ಲಕ್ಷ ಮತದಾನ ಕೇಂದ್ರಗಳಿದ್ದವು. ಈ ಬಾರಿ ಮತದಾನ ಕೇಂದ್ರಗಳ ಸಂಖ್ಯೆಯಲ್ಲಿ ಶೇ 10.1ರಷ್ಟು ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News