ಕೆಸಿಎಫ್ ಕುವೈತ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ

Update: 2019-03-15 13:47 GMT

ಕುವೈತ್, ಮಾ. 15: 'ನಿನ್ನ ಆರೋಗ್ಯ ನಿನ್ನ ಕೈಯಲ್ಲಿ' ಎಂಬ ಉದ್ದೇಶದಿಂದ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ ಫರ್ವಾನಿಯ ಅಲ್ ಬದ್ರ್ ಸಮಾ ಕ್ಲಿನಿಕ್ ನ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು.

ಕೆಸಿಎಫ್ ಅಂತರ್ ರಾಷ್ಟ್ರೀಯ ಆಡಳಿತ ಕಾರ್ಯದರ್ಶಿ ಹುಸೈನ್ ಎರ್ಮಾಡ್ ಉಸ್ತಾದ್ ನೇತೃತ್ವದಲ್ಲಿ ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್ ಬಾದುಷ ಸಖಾಫಿ ಕೊಡಗು ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಲ್ ಬದ್ರ್ ಸಮಾ ಕ್ಲಿನಿಕ್ ಇದರ ಮ್ಯಾನೆಜಿಂಗ್ ಡಿಪಟ್೯ಮೆಂಟ್ ಅವರನ್ನು ಗೌರವಿಸಲಾಯಿತು. ಉಮರ್ ಝುಹ್ರಿ ಉಸ್ತಾದ್, ಕೆಸಿಎಫ್ ಅಂತರ್ ರಾಷ್ಟ್ರೀಯ ಕೌನ್ಸಿಲ್ ಯಾಕೂಬ್ ಕಾರ್ಕಳ, ತೌಫೀಕ್ ಅಡ್ಡೂರ್, ಕೆಸಿಎಫ್ ಕುವೈತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ವೇಣೂರು, ಮುಸ್ತಾಫ ಉಳ್ಳಾಲ, ಇಕ್ಬಾಲ್ ಕಂದಾವರ, ಅಬ್ದುಲ್ ಮಾಲಿಕ್ ಫಾಹಿಲ್ ಹಾಗು ರಾಷ್ಟ್ರೀಯ ನಾಯಕರು, ಝೋನ್ ನಾಯಕರು, ಸೆಕ್ಟರ್ ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News