ಸಿರಿಯ: 8 ವರ್ಷದ ಸಂಘರ್ಷದಲ್ಲಿ 3.70 ಲಕ್ಷ ಮಂದಿ ಮೃತ್ಯು

Update: 2019-03-15 15:25 GMT

ಬೈರೂತ್, ಮಾ. 15: ಸಿರಿಯದಲ್ಲಿ ಎಂಟು ವರ್ಷಗಳ ಕಾಲ ನಡೆದ ಆಂತರಿಕ ಕಲಹದಲ್ಲಿ 1,12,000 ನಾಗರಿಕರು ಸೇರಿದಂತೆ 3,70,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಎಂಬ ನಿಗಾ ಸಂಸ್ಥೆ ಶುಕ್ರವಾರ ತಿಳಿಸಿದೆ.

ಮೃತರಲ್ಲಿ 21,000ಕ್ಕೂ ಅಧಿಕ ಮಕ್ಕಳು ಮತ್ತು 13,000ಕ್ಕೂ ಅಧಿಕ ಮಹಿಳೆಯರು ಸೇರಿದ್ದಾರೆ ಎಂದು ಅದು ಹೇಳಿದೆ.

2011 ಮಾರ್ಚ್ 15ರಂದು ಸಿರಿಯದ ದಕ್ಷಿಣದ ನಗರ ದರಾದಲ್ಲಿ ಅಭೂತಪೂರ್ವ ಮಟ್ಟದಲ್ಲಿ ಸರಕಾರ ವಿರೋಧಿ ಪ್ರತಿಭಟನೆಗಳು ಸ್ಫೋಟಗೊಂಡ ಬಳಿಕ ಆಂತರಿಕ ಸಂಘರ್ಷ ಆರಂಭಗೊಂಡಿದೆ.

ಪ್ರತಿಭಟನೆಗಳು ಸಿರಿಯದಾದ್ಯಂತ ಹರಡಿದವು ಹಾಗೂ ಪ್ರತಿಭಟನಕಾರರನ್ನು ಸರಕಾರ ಹಿಂಸಾತ್ಮಕವಾಗಿ ಹತ್ತಿಕ್ಕಿತು. ಇದರಿಂದಾಗಿ ಬಹು ಹಂತದ ಸಶಸ್ತ್ರ ಸಂಘರ್ಷಕ್ಕೆ ನಾಂದಿ ಹಾಡಿತು ಹಾಗೂ ಇದರಲ್ಲಿ ವಿದೇಶಿ ಶಕ್ತಿಗಳೂ ಪಾಲ್ಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News