‘‘ಸಾಯ್ ಗೋಪಿಚಂದ್ ಅಕಾಡಮಿ’’ಗೆ ಮರಳಲಿರುವ ಸಿಂಧು

Update: 2019-03-16 18:18 GMT

ಹೈದರಾಬಾದ್, ಮಾ.16: ಪ್ರತ್ಯೇಕ ತರಬೇತಿ ತೆಗೆದುಕೊಳ್ಳಲು ನಿರ್ಧರಿಸಿದ 9 ತಿಂಗಳ ಬಳಿಕ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಈಗ ಸೈನಾ ನೆಹ್ವಾಲ್‌ರಂತೆಯೇ ತನ್ನ ಮೊದಲಿನ ಅಕಾಡಮಿಯಲ್ಲಿ ತರಬೇತಿ ಪಡೆಯಲು ತೀರ್ಮಾನಿಸಿದ್ದಾರೆ.

2018ರ ಜೂನ್‌ನಲ್ಲಿ ತನಗೆ ಪ್ರತ್ಯೇಕ ಸ್ಥಳದಲ್ಲಿ ತರಬೇತಿ ಬೇಕೆಂದು ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿಗೆ ಸೂಚಿದ್ದ ಗೋಪಿಚಂದ್ ಅವರು ಸಿಂಧುಗೆ ‘‘ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡಮಿ’’ಯಲ್ಲಿ ತರಬೇತಿ ನೀಡಲು ಆರಂಭಿಸಿದ್ದರು. ಇನ್ನೊಂದೆಡೆ ಸೈನಾ ಹಾಗೂ ಕಿಡಂಬಿ ಶ್ರೀಕಾಂತ್ ಸೇರಿದಂತೆ ಇತರ ಹಿರಿಯ ಬ್ಯಾಡ್ಮಿಂಟನ್ ತಾರೆಯರು ಈ ಅಕಾಡಮಿಯಿಂದ ಒಂದು ಕಿ.ಮೀ ದೂರವಿರುವ ‘‘ಸಾಯ್ ಗೋಪಿಚಂದ್ ಅಕಾಡಮಿ’’ಯಲ್ಲಿ ಅಭ್ಯಾಸ ನಡೆಸಿದ್ದರು.

ಏಕಾಂಗಿಯಾಗಿ ಅಭ್ಯಾಸ ನಡೆಸಿದ್ದರ ಪರಿಣಾಮವೋ ಎಂಬಂತೆ ಕಳೆದ ವರ್ಷ ಹಿನ್ನಡೆ ಹಾಗೂ ಈ ವರ್ಷದ ಆಲ್ ಇಂಗ್ಲೆಂಡ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸಿಂಧು ಸೋತು ಹೊರನಡೆದಿದ್ದರು. ಈ ಕಳಪೆ ಪ್ರದರ್ಶನವು ಅವರನ್ನು ಮತ್ತೆ ತನ್ನ ತವರು ಅಕಾಡಮಿಗೆ ಮರಳುವಂತೆ ಮಾಡಿದೆ. ತನ್ನ ವೃತ್ತಿಜೀವನ ಗಮನದಲ್ಲಿಟ್ಟುಕೊಂಡು ಸಾಯ್ ಗೋಪಿಚಂದ್ ಅಕಾಡಮಿ ಮರಳುತ್ತಿರುವುದಾಗಿ ಸಿಂಧು ಶುಕ್ರವಾರ ಸುದ್ದಿಸಂಸ್ಥೆಯೊಂದಕ್ಕೆ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News