ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರ ಬಂಧನ

Update: 2019-03-16 18:35 GMT

ಪುದುಕೋಟೈ, ಮಾ. 16: ಪೊಲ್ಲಾಚಿ ಲೈಂಗಿಕ ಹಗರಣದ ಕುರಿತು ಧರಣಿ ನಡೆಸುತ್ತಿದ್ದ ಪುದುಕೋಟೈ ಸರಕಾರಿ ಮಹಿಳಾ ಕಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ಇಲ್ಲಿ ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಧರಣಿ ಹಿಂದೆಗೆಯಲು ವಿದ್ಯಾರ್ಥಿಗಳು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿನಿಯರನ್ನು ವಶಕ್ಕೆ ತೆಗೆದುಕೊಂಡರು.

ಪೊಲ್ಲಾಚಿ ಲೈಂಗಿಕ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಗಿತ್ತು. ಇದಲ್ಲದೆ, ಪೊಲ್ಲಾಚಿ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ತಮಿಳುನಾಡಿನಿಂದ ಹೊರಗಡೆ ವರ್ಗಾಯಿಸುವಂತೆ ಮನವಿಯಲ್ಲಿ ಕೋರಲಾಗಿತ್ತು. ಪೊಲ್ಲಾಚಿ ಲೈಂಗಿಕ ಹಗರಣದಲ್ಲಿ 50ಕ್ಕಿಂತಲೂ ಅಧಿಕ ಮಹಿಳೆಯರಿಗೆ ಆಮಿಷ ಒಡ್ಡಲಾಗಿತ್ತು ಹಾಗೂ ನಾಲ್ವರ ಗುಂಪು ಅತ್ಯಾಚಾರ ಎಸಗಿತ್ತು. ಈ ಕೃತ್ಯವನ್ನು ವೀಡಿಯೊ ದಾಖಲೀಕರಣ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News