2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಇರ್ಫಾನ್

Update: 2019-03-17 07:26 GMT
                                                       ಇರ್ಫಾನ್ ಕೆ.ಟಿ

ನೊಮಿ, ಮಾ.17: ಏಶ್ಯನ್ ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ನಾಲ್ಕನೇ ಸ್ಥಾನ ಪಡೆದ ಭಾರತದ ರೇಸ್‌ವಾಕರ್ ಇರ್ಫಾನ್ ಕೆ.ಟಿ. 2020ರಲ್ಲಿ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

20 ಕಿ.ಮೀ. ನಡಿಗೆಯಲ್ಲಿ 1:20.57 ಸೆಕೆಂಡ್‌ನಲ್ಲಿ ಗುರಿ ತಲುಪಿದ ಇರ್ಫಾನ್ ಟೋಕಿಯೊ ಒಲಿಂಪಿಕ್ಸ್‌ಗೆ ನಿಗದಿಪಡಿಸಿರುವ ಸಮಯದ ಮಾನದಂಡವನ್ನು ತಲುಪಿದರು.

 ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದ ಇರ್ಫಾನ್ ದೋಹಾದಲ್ಲಿ ಸೆ.27ರಿಂದ ಅ.6ರ ತನಕ ನಡೆಯುವ ಐಎಎಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಸ್ಥಾನ ಪಡೆದರು.

ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿರುವ ಇನ್ನಿಬ್ಬರು ಭಾರತೀಯ ರೇಸ್ ವಾಕರ್‌ಗಳೆಂದರೆ: ದೇವಿಂದರ್(1:21.22) ಹಾಗೂ ಗಣಪತಿ(1:22.12).

ಇರ್ಫಾನ್ ಲಂಡನ್‌ನಲ್ಲಿ ನಡೆದ 2012ರ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದು ಇದೀಗ ಎರಡನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅಪೂರ್ವ ಅವಕಾಶ ಪಡೆದಿದ್ದಾರೆ.

‘ಸೂಜಿ ಬಳಸಬಾರದು’ ಎಂಬ ನಿಯಮವನ್ನು ಪಾಲಿಸದ ಕಾರಣ ಕಳೆದ ವರ್ಷ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಇರ್ಫಾನ್‌ರನ್ನು ಸ್ವದೇಶಕ್ಕೆ ವಾಪಸ್ ಕಳುಹಿಸಿಕೊಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News