ಲೋಕಸಭಾ ಚುನಾವಣಾ ಕಣಕ್ಕೆ ಉಮರ್ ಖಾಲಿದ್ ತಂದೆ: ಯಾವ ಪಕ್ಷ ಗೊತ್ತೇ?

Update: 2019-03-17 11:22 GMT

ಕೊಲ್ಕತ್ತಾ, ಮಾ.17: ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ತಂದೆ ಸೈಯದ್ ಖಾಸಿಂ ರಸೂಲ್ ಇಲ್ಯಾಸ್ ಅವರು ಪಶ್ಚಿಮ ಬಂಗಾಳದಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಟಿಕೆಟ್‍ ನಲ್ಲಿ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.

ಮತದಾರರ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಜಂಗೀಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರ ಅಭಿನಿತ್ ಅವರು ಈ ಕ್ಷೇತ್ರವನ್ನು ಪ್ರತಿಧಿಸುತ್ತಿದ್ದರು.

2011ರ ಜನಗಣತಿ ಪ್ರಕಾರ, ಈ ಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 61.79ರಷ್ಟು ಮುಸ್ಲಿಮರಿದ್ದಾರೆ. ಜಂಗೀಪುರದಲ್ಲಿ ಉತ್ತಮ ಗುಣಮಟ್ಟದ ಸೆಣಬು ಮತ್ತು ಮಾವು ಬೆಳೆಯುತ್ತಿದ್ದರೂ, ಉದ್ಯೋಗ ಅರಸಿ ಕ್ಷೇತ್ರದಿಂದ ಸುಮಾರು ಏಳರಿಂದ ಎಂಟು ಲಕ್ಷ ಮಂದಿ ಕೊಲ್ಕತ್ತಾಗೆ ವಲಸೆ ಹೋಗಿದ್ದಾರೆ. ಇದನ್ನು ಇಲ್ಲಿ ಸಂಸ್ಕರಿಸಲು ವ್ಯವಸ್ಥೆ ಇಲ್ಲದಿರುವುದರಿಂದ ವಲಸೆ ಹೋಗುವಂತಾಗಿದೆ. ಚುನಾವಣಾ ಪ್ರಚಾರದಲ್ಲಿ ಇದನ್ನೇ ಪ್ರಮುಖ ವಿಷಯವನ್ನಾಗಿ ಮಾಡಿಕೊಳ್ಳುವುದಾಗಿ ಅವರು "ದ ಹಿಂದೂ" ಜತೆ ಮಾತನಾಡುತ್ತಾ ಸ್ಪಷ್ಟಪಡಿಸಿದರು.

ಟಿಎಂಸಿ, ಕಾಂಗ್ರೆಸ್, ಸಿಪಿಎಂ ಹಾಗೂ ಬಿಜೆಪಿ ಕೂಡಾ ಕಣಕ್ಕೆ ಇಳಿಯುವ ಸಾಧ್ಯತೆ ಇದ್ದರೂ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಸ್ಲಿಂ ಮತಗಳ ವಿಭಜನೆಗೆ ಕಾರಣವಾಗುವುದಿಲ್ಲ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News