ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ಮಹಾಸಭೆ

Update: 2019-03-17 12:43 GMT

ಮದೀನಾ: ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ನ ಮಹಾಸಭೆಯು ಇತ್ತೀಚೆಗೆ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.

ಇಸ್ಮಾಯಿಲ್ ಸಅದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂತ್ವನ ಪ್ರವರ್ತನೆಗಳಲ್ಲಿ ಮದೀನಾ ಮುನವ್ವರದ ಕೆಸಿಎಫ್ ಕಾರ್ಯಕರ್ತರ  ಕೆಲಸ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಮದೀನಾ ಸೆಕ್ಟರ್ ಕಾರ್ಯದರ್ಶಿ ಅಶ್ರಫ್ ದೇರಳಕಟ್ಟೆ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಸಿಎಫ್  ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಮಾತನಾಡಿದರು.

ಸೆಕ್ಟರ್ ರಿ-ಒರ್ಗನೈಝನ್ ಡೈರೆಕ್ಟರ್ ಯೂಸುಫ್ ಮದನಿ ನೇತೃತ್ವದಲ್ಲಿ ನೂತನ ಕಮಿಟಿಯನ್ನು ರಚಿಸಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ನೂಜಿಯವರನ್ನು ಮರುನೇಮಕಗೊಳಿಸಲಾಯಿತು. ಕಾರ್ಯದರ್ಶಿಯಾಗಿ ಅಶ್ರಫ್ ದೇರಳಕಟ್ಟೆ (ನ್ಯಾಷನಲ್) ಮರು ಆಯ್ಕೆಗೊಂಡರು. ಖಜಾಂಚಿ ಯಾಗಿ ಸುಲೈಮಾನ್ ತುರ್ಕಳಿಕೆ ಅವರನ್ನು ನೇಮಕ ಗೊಳಿಸಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳು: ಸಂಘಟನಾ ವಿಭಾಗ ಅಧ್ಯಕ್ಷ : ಇಕ್ಬಾಲ್ ಕುಪ್ಪೆಪದವು , ಕಾರ್ಯದರ್ಶಿ: ಅಸಿಫ್ ಅಬ್ಬಾಸ್ ಬದ್ಯಾರ್, ಶಿಕ್ಷಣ ವಿಭಾಗ ಅಧ್ಯಕ್ಷ : ಇಸ್ಮಾಯಿಲ್ ಸಅದಿ ಬೇಂಗಿಲ, ಕಾರ್ಯದರ್ಶಿ :ಹುಸೈನಾರ್ ಉರುವಾಲ್ ಪದವು, ಸಾಂತ್ವನ ವಿಭಾಗ ಅಧ್ಯಕ್ಷ :ತಾಜುದ್ದೀನ್ ಸುಳ್ಯ, ಕಾರ್ಯದರ್ಶಿ :ರಝಾಕ್ ಉಳ್ಳಾಲ್, ಪಬ್ಲಿಶಿಂಗ್ ವಿಭಾಗ ಅಧ್ಯಕ್ಷ : ಇಕ್ಬಾಲ್ ಕುಪ್ಪೆಪದವು, ಕಾರ್ಯದರ್ಶಿ : ಹಕೀಂ ಬೋಳಾರ್ ಹಾಗು ಶರೀಫ್ ಮರವೂರು, ಮುಹಮ್ಮದಾಲಿ ಪಾಣೆಮಂಗಳೂರು, ರಝಾಕ್ ಅಳಕೆಮಜಲು, ಇಸ್ಮಾಯಿಲ್ ಕುಂಬ್ರಾ ಅಲ್ ಮರಾಯಿ, ಮುಹಮ್ಮದ್ ಅಶ್ರಫ್ ಹಾಜಿ ಕಿನ್ಯ, ರಝಾಕ್ ಬೈತಡ್ಕ ಸೇರಿದಂತೆ  ಇತರರನ್ನು ಕಾರ್ಯಕಾರಿ ಸಮಿತಿಗೆ  ನೇಮಿಸಲಾಯಿತು.

ಹುಸೇನಾರ್ ಉರುವಾಲ್ ಪದವು  ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

Writer - ಹಕೀಂ ಬೋಳಾರ್

contributor

Editor - ಹಕೀಂ ಬೋಳಾರ್

contributor

Similar News