ಏಶ್ಯನ್ ಚಾಂಪಿಯನ್‌ಶಿಪ್: ವಿನೇಶ್, ಬಜರಂಗ್‌ಗೆ ಮತ್ತೊಂದು ಸವಾಲು

Update: 2019-03-17 18:24 GMT

ಹೊಸದಿಲ್ಲಿ, ಮಾ.17: ಮುಂದಿನ ತಿಂಗಳು ಚೀನಾದಲ್ಲಿ ಆರಂಭವಾಗಲಿರುವ ಹಿರಿಯರ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ವಿನೇಶ್ ಪೋಗಟ್, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್‌ಗೆ ಹೊಸ ಸವಾಲಾಗಿ ಪರಿಣಮಿಸಿದೆ.

ಚಾಂಪಿಯನ್‌ಶಿಪ್‌ಗೆ ರವಿವಾರ 30 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಮಹಿಳೆಯರಿಗೆ ಶನಿವಾರ ಲಕ್ನೋದಲ್ಲಿ ಹಾಗೂ ಪುರುಷರಿಗೆ ಸೋನೆಪತ್‌ನಲ್ಲಿ ರವಿವಾರ ಟ್ರಯಲ್ಸ್ ನ್ನು ಆಯೋಜಿಸಿದೆ.

ಬಜರಂಗ್ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಇದೇ ವಿಭಾಗದಲ್ಲಿ ಬಲ್ಗೇರಿಯದಲ್ಲಿ ಇತ್ತೀಚೆಗೆ ನಡೆದ ಕುಸ್ತಿ ಟೂರ್ನಿಯಲ್ಲಿ ಚಿನ್ನ ಜಯಿಸಿದ್ದರು. ವಿನೇಶ್ ಮೊದಲ ಬಾರಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿಗೆ ತೃಪ್ತಿಪಟ್ಟಿದ್ದರು. ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ 65 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದು,ಪೂಜಾ ಧಾಂಡ 59 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಎ.23 ರಿಂದ 28ರ ತನಕ ನಡೆಯಲಿದ್ದು, ಸಾಕ್ಷಿ ತನ್ನ ಹಿಂದಿನ 62 ಕೆಜಿ ವಿಭಾಗದಲ್ಲಿ ಹಾಗೂ ನವಜೋತ್ ಕೌರ್ 65 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News