ಮೊದಲ ಬಾರಿ ಟೆಸ್ಟ್ ಪಂದ್ಯ ಜಯಿಸಿದ ಅಫ್ಘಾನಿಸ್ತಾನ

Update: 2019-03-18 07:00 GMT

ಡೆಹ್ರಾಡೂನ್, ಮಾ.18: ಐರ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳ ಅಂತರದಿಂದ ಮಣಿಸಿದ ಅಫ್ಘಾನಿಸ್ತಾನ ಮೊದಲ ಬಾರಿ ಟೆಸ್ಟ್ ಪಂದ್ಯವೊಂದನ್ನು ಜಯಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ.

ಸೋಮವಾರ ಗೆಲ್ಲಲು 147 ರನ್ ಚೇಸಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ರಹಮತ್ ಶಾ (76) ಹಾಗೂ ಇಹ್ಸಾನುಲ್ಲಾ ಜನತ್(ಔಟಾಗದೆ 65) 2ನೇ ವಿಕೆಟ್‌ಗೆ ಸೇರಿಸಿದ 139 ರನ್ ಜೊತೆಯಾಟದ ನೆರವಿನಿಂದ ಭರ್ಜರಿ ಜಯ ದಾಖಲಿಸಿತು.

ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿರುವ ಅಫ್ಘಾನಿಸ್ತಾನಕ್ಕೆ ಇದು ಎರಡನೇ ಪಂದ್ಯವಾಗಿದೆ.

 ಇದಕ್ಕೂ ಮೊದಲು ಅಫ್ಘಾನಿಸ್ತಾನ ಟಿ-20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದರೆ, ಏಕದಿನ ಸರಣಿ 2-2 ರಿಂದ ಸಮಬಲಗೊಂಡಿತ್ತು. ಒಂದು ಪಂದ್ಯ ಮಳೆಗಾಹುತಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News