‘ಪಬ್ ಜಿ’ ಗೇಮ್ ಆಡುತ್ತಿದ್ದ ಯುವಕರಿಬ್ಬರು ರೈಲಿನಡಿಗೆ ಬಿದ್ದು ಮೃತ್ಯು

Update: 2019-03-18 08:40 GMT

ಮುಂಬೈ, ಮಾ.18: ಮಹಾರಾಷ್ಟ್ರದ ಹಿಂಗೊಲಿ ಜಿಲ್ಲೆಯ ಖಟ್ಕಲಿ ಬೈಪಾಸ್ ಎಂಬಲ್ಲಿ ರೈಲ್ವೆ ಹಳಿ ಪಕ್ಕದಲ್ಲಿ ಕುಳಿತುಕೊಂಡು ಆನ್ಲೈನ್ ಗೇಮ್ ‘ಪಬ್ ಜಿ’ ಆಡುತ್ತಿದ್ದ ಇಬ್ಬರು ಯುವಕರು ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ..

ಮೃತರನ್ನು ನಾಗೇಶ್ ಗೋರೆ (24) ಹಾಗೂ ಸ್ವಪ್ನಿಲ್ ಅನ್ನಪೂರ್ಣೆ (22) ಎಂದು ಗುರುತಿಸಲಾಗಿದೆ. ಹೈದರಾಬಾದ್-ಅಜ್ಮೀರ್ ರೈಲು ಅವರ ಮೇಲೆ ಹಾದು ಹೋಗಿದೆ. ಸ್ಥಳೀಯ ನಿವಾಸಿಗಳು ಅವರಿಬ್ಬರ ಮೃತದೇಹಗಳನ್ನು ತಡ ರಾತ್ರಿ ಅಲ್ಲಿ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News