ಹತ್ಯಾಕಾಂಡಕ್ಕೆ ನಾನು ಜವಾಬ್ದಾರನಲ್ಲ: ಹಂತಕನಿಗೆ ಬಂದೂಕುಗಳನ್ನು ಮಾರಿದ್ದ ಶಸ್ತ್ರಾಸ್ತ್ರ ವ್ಯಾಪಾರಿ

Update: 2019-03-18 17:42 GMT

ಕ್ರೈಸ್ಟ್‌ಚರ್ಚ್ (ನ್ಯೂಝಿಲ್ಯಾಂಡ್), ಮಾ. 18: ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ನಡೆದ 50 ಜನರ ಮಾರಣಹೋಮಕ್ಕೆ ನಾನು ಜವಾಬ್ದಾರನಲ್ಲ ಎಂದು ಹಂತಕನಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿರುವ ನ್ಯೂಝಿಲ್ಯಾಂಡ್‌ನ ಶಸ್ತ್ರಾಸ್ತ್ರ ವ್ಯಾಪಾರಿ ಸೋಮವಾರ ಹೇಳಿದ್ದಾರೆ.

ಹಂತಕ ಬ್ರೆಂಟನ್ ಟ್ಯಾರಂಟ್‌ಗೆ ತಾನು ನಾಲ್ಕು ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡಿರುವುದನ್ನು ‘ಗನ್ ಸಿಟಿ’ಯ ಆಡಳಿತ ನಿರ್ದೇಶಕ ಡೇವಿಡ್ ಟಿಪಲ್ ಒಪ್ಪಿಕೊಂಡಿದ್ದಾರೆ.

‘‘ಹಂತಕನು ಬಂದೂಕು ಪರವಾನಿಗೆ ಹೊಂದಿದ್ದನು ಹಾಗೂ ಅವನಲ್ಲಿ ಅಸಾಮಾನ್ಯವಾದುದನ್ನು ನಾವು ಕಾಣಲಿಲ್ಲ’’ ಎಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಅವರು ಹೇಳಿದರು.

ಈ ಹತ್ಯಾಕಾಂಡದಲ್ಲಿ ನೀವೂ ಪಾಲುದಾರರು ಎಂಬ ಭಾವನೆ ನಿಮ್ಮಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಇಲ್ಲ, ಆ ಭಾವನೆ ನನ್ನಲ್ಲಿಲ್ಲ’’ ಎಂದರು.

‘‘ಈ ಹಂತಕನಂತೆ ಬೇರೆ ಯಾರಾದರೂ ಬಂದೂಕು ಪರವಾನಿಗೆಯೊಂದಿಗೆ ಬಂದರೆ, ಬಂದೂಕುಗಳನ್ನು ಮಾರಾಟ ಮಾಡುವುದನ್ನು ನಾನು ಮುಂದುವರಿಸುತ್ತೇನೆ. ಬಂದೂಕು ಪರವಾನಿಗೆಗಾಗಿ ಬರುವ ಅರ್ಜಿಗಳನ್ನು ವಿವರವಾಗಿ ಪರಿಶೀಲನೆ ನಡೆಸುವುದು ಪೊಲೀಸರ ಜವಾಬ್ದಾರಿ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News