ಕುರ್ ಆನ್ ಪಠಣದೊಂದಿಗೆ ಆರಂಭವಾದ ನ್ಯೂಝಿಲ್ಯಾಂಡ್ ನ ಪಾರ್ಲಿಮೆಂಟ್ ಅಧಿವೇಶನ

Update: 2019-03-19 11:34 GMT

ಕ್ರೈಸ್ಟ್ ಚರ್ಚ್, ಮಾ.19: ಇಲ್ಲಿನ ಮಸೀದಿಗಳಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರದ ನ್ಯೂಝಿಲ್ಯಾಂಡ್ ನ ಪ್ರಥಮ ಪಾರ್ಲಿಮೆಂಟ್ ಅಧಿವೇಶನವನ್ನು ಪವಿತ್ರ ಕುರ್ ಆನ್ ಪಠಣದೊಂದಿಗೆ ಆರಂಭಿಸಲಾಯಿತು.

ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂಡ ಅರ್ಡರ್ನ್, ದಾಳಿಯ ಸಂತ್ರಸ್ತರ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭ ಭಯೋತ್ಪಾದಕನನ್ನು ಹಿಮ್ಮೆಟ್ಟಿಸಲು ಯತ್ನಿಸಿದ ನಯೀಮ್ ರಶೀದ್ ರ ತ್ಯಾಗವನ್ನು ಹೊಗಳಿದರು.

ಈ ದಾಳಿಯಲ್ಲಿ ಭಾರತದ ಐವರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ಮೃತಪಟ್ಟವರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಭಾರತ, ಟರ್ಕಿ, ಕುವೈತ್, ಸೊಮಾಲಿಯಾ ದೇಶಗಳ ನಾಗರಿಕರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News