ಬಾಲಕಿಯ ಸಾಮೂಹಿಕ ಅತ್ಯಾಚಾರಗೈದು, ತಲೆಕಡಿದ ಮಾವ, ಸೋದರರು

Update: 2019-03-19 11:44 GMT

ಭೋಪಾಲ್, ಮಾ.19: ಮಧ್ಯ ಪ್ರದೇಶದ ಸಾಗರ್ ಎಂಬ ಗ್ರಾಮದಲ್ಲಿ 12 ವರ್ಷದ ಬಾಲಕಿಯನ್ನು ಆಕೆಯ ಸ್ವಂತ ಸೋದರರು ಹಾಗೂ ಮಾವ ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದು ನಂತರ ಕೊಲೆಗೈದ ಅಮಾನುಷ ಘಟನೆ ವರದಿಯಾಗಿದೆ.

ಘಟನೆ ಮಾರ್ಚ್ 14ರಂದು ನಡೆದಿದ್ದು ಅದೇ ದಿನ ಬಾಲಕಿಯ ಮೃತದೇಹ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ. ಆಕೆಯ ಕತ್ತು ಹಿಸುಕಿ ಕೊಂದು ನಂತರ ತಲೆ ಕಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಶಾಲೆಯಿಂದ ಮನೆಗೆ ಮರಳಿ ಬಾರದೇ ಇದ್ದಾಗ ಆಕೆಯ ತಂದೆ ನಾಪತ್ತೆ ದೂರು ದಾಖಲಿಸಿದ್ದರು. ಆಕೆಯನ್ನು ಕುಟುಂಬದೊಂದಿಗೆ ಭೂವಿವಾದ ಹೊಂದಿದ್ದ ಛೋಟೆ ಪಟೇಲ್ ಎಂಬಾತ ಕೊಲೆಗೈದಿರಬಹುದೆಂದು ಬಾಲಕಿಯ ಮಾವ ಶಂಕಿಸಿದಾಗ ಪೊಲೀಸರು ಆತನನ್ನೇ ಶಂಕಿಸಿದ್ದರು.

ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ನಡೆಸಲಾಗಿದೆ ಎಂದು ಪೋಸ್ಟ್ ಮಾರ್ಟಂ ವರದಿ ಬರುತ್ತಲೇ ಆಕೆಯ ಮಾವನನ್ನು ಪ್ರಶ್ನಿಸಿದಾಗ ಸತ್ಯ ಹೊರಬಿದ್ದಿತ್ತು. ಬಾಲಕಿಯ ಸೋದರರಲ್ಲೊಬ್ಬಾತ ಆಕೆ ಶಾಲೆಯಿಂದ ಮರಳಿ ಮನೆಗೆ ಬರುತ್ತಿದ್ದಾಗ ಮಾವನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯ ಇಬ್ಬರು ಸೋದರರು ಹಾಗೂ ಮಾವ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರೆಂದು ಆರೋಪಿಸಲಾಗಿದೆ. ಪೊಲೀಸ್ ದೂರು ನೀಡುವುದಾಗಿ ಬಾಲಕಿ ಬೆದರಿಸಿದಾಗ ಆಕೆಯ ಅತ್ತೆಯೇ ಕತ್ತು ಹಿಸುಕಿದ್ದಳೆನ್ನಲಾಗಿದೆ. ನಂತರ ಬಾಲಕಿಯ ತಲೆ ಕಡಿದು ಮೃತದೇಹವನ್ನು ಗದ್ದೆಯಲ್ಲಿ ಎಸೆಯಲಾಗಿತ್ತು.

ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ ರಕ್ತಸಿಕ್ತ ಬಟ್ಟೆ ಹಾಗೂ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News