ರಾಬರ್ಟ್ ವಾದ್ರಾ ನಿರೀಕ್ಷಣಾ ಜಾಮೀನು ಮಾರ್ಚ್ 25ರವರೆಗೆ ವಿಸ್ತರಣೆ

Update: 2019-03-19 17:51 GMT

ಹೊಸದಿಲ್ಲಿ, ಮಾ. 19: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಾಬರ್ಟ್ ವಾದ್ರಾ ಅವರ ನಿರೀಕ್ಷಣಾ ಜಾಮೀನನ್ನು ದಿಲ್ಲಿ ನ್ಯಾಯಾಲಯ ಮಂಗಳವಾರ ಮಾರ್ಚ್ 25ರ ವರೆಗೆ ವಿಸ್ತರಿಸಿದೆ.

ವಾದ್ರಾ ಅವರ ಕಸ್ಟಡಿ ವಿಚಾರಣೆ ಅಗತ್ಯ ಇದೆ ಎಂದು ಜಾರಿ ನಿರ್ದೇಶನಾಲಯ ಹೇಳಿದ ಬಳಿಕ ವಿಚಾರಣೆಗೆ ಸಹಕರಿಸುವಂತೆ ನ್ಯಾಯಾಲಯ ವಾದ್ರಾ ಅವರಿಗೆ ಸೂಚಿಸಿದೆ. ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ವಾದ್ರಾ ಅವರಿಗೆ ಈ ತಾತ್ಕಾಲಿಕ ಬಿಡುಗಡೆ ನೀಡಿದ್ದಾರೆ. ಲಂಡನ್‌ನಲ್ಲಿ 1.9 ದಶಲಕ್ಷ ಪೌಂಡ್‌ಗಳ ಮೌಲ್ಯದ ಸೊತ್ತು ಖರೀದಿಸಲು ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಾದ್ರಾ ನಿರೀಕ್ಷಣಾ ಜಾಮೀನೆಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News