ಕೆಸಿಎಫ್ ತ್ವಾಯಿಫ್ ಸೆಕ್ಟರ್ ನೂತನ ಸಮಿತಿ ಅಸ್ತಿತ್ವಕ್ಕೆ

Update: 2019-03-19 18:39 GMT

ಜಿದ್ದಾ,ಮಾ.19: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ತ್ವಾಯಿಫ್ ಸೆಕ್ಟರಿನ ಮಹಾಸಭೆ ಇತ್ತೀಚೆಗೆ ತ್ವಾಯಿಫ್ ಕೆಸಿಎಫ್ ಭವನದಲ್ಲಿ ಅಧ್ಯಕ್ಷರಾದ ಇಕ್ಬಾಲ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಾಂತ್ವನ ವಿಭಾಗ ಅಧ್ಯಕ್ಷ ಮೂಸ ಹಾಜಿ ಕಿನ್ಯಾ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ತ್ವೈಬಾ ಎಜ್ಯುಕೇಶನಲ್ ಸೆಂಟರ್ ಈಶ್ವರಮಂಗಿಲ ಹಾಗೂ ವೈಸ್ ಪ್ರಿನ್ಸಿಪಾಲ್ ಮುಹಿಮ್ಮಾತ್ ಕುರ್'ಆನ್ ರಿಸರ್ಚ್ ಸೆಂಟರ್ ಇದರ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ ಉಪದೇಶ ನೀಡಿದರು. ಶಾನು ಕಾವೂರು ಕಿರಾಅತ್ ಪಠಿಸಿದರು.

ಬಳಿಕ ಕಳೆದ ವರ್ಷದ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹನೀಫ್ ಹಿಮಮಿ ಹಾಗೂ ಕೋಶಾಧಿಕಾರಿ ಅಶ್ರಫ್ ಮಂಡೆಕೋಲು ಲೆಕ್ಕ ಪತ್ರವನ್ನು ಮಂಡಿಸಿದರು. ಝೋನ್ ನಿಂದ ರೀ- ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಇಕ್ಬಾಲ್ ಕಕ್ಕಿಂಜೆ ಯವರು ಹಳೆ ಕಮಿಟಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು

ಅಧ್ಯಕ್ಷರಾಗಿ ಹನೀಫ್ ಹಿಮಮಿ ಕುಂಡಡ್ಕ, ಪ್ರ.ಕಾರ್ಯದರ್ಶಿಯಾಗಿ ಅಝ್ವೀರ್ ಬಡಕಬೈಲ್, ಕೋಶಾಧಿಕಾರಿಯಾಗಿ ಹಂಝ ಮಡಿಕೇರಿ ನೇಮಕಗೊಂಡರು. ಸಂಘಟನೆ ಇಲಾಖೆ ಅಧ್ಯಕ್ಷರಾಗಿ ಇಕ್ಬಾಲ್ ಮದನಿ ಪಾವೂರು, ಕಾರ್ಯದರ್ಶಿಯಾಗಿ ಅಯ್ಯೂಬ್ ಕುಂದಾಪುರ ಆಯ್ಕೆಯಾದರು. ಶಿಕ್ಷಣ ಇಲಾಖೆಯ ಅಧ್ಯಕ್ಷರಾಗಿ ಮುಹಮ್ಮದ್ ಝುಹ್ರಿ ಬೆಳಾಲ್, ಕಾರ್ಯದರ್ಶಿಯಾಗಿ ಹಮೀದ್ ಕರೋಪಾಡಿ, ಸಾಂತ್ವನ ಇಲಾಖೆಯ ಅಧ್ಯಕ್ಷರಾಗಿ ಸಿದ್ದೀಖ್ ಕರೋಪಾಡಿ, ಕಾರ್ಯದರ್ಶಿಯಾಗಿ ರಿಯಾಝ್ ಉಳ್ಳಾಲ, ಪ್ರಕಾಶನ ಇಲಾಖೆಯ ಅಧ್ಯಕ್ಷರಾಗಿ ಶಾನು ಕಾವೂರು, ಕಾರ್ಯದರ್ಶಿಯಾಗಿ ನಾಸಿರ್ ಬೋವು ಆಯ್ಕೆಯಾದರು.

ಕಾರ್ಯಕಾರಿ ಸದಸ್ಯರಾಗಿ ಅಶ್ರಫ್ ಮಂಡೆಕೋಲು, ಮನ್ಸೂರ್ ಕನ್ಯಾನ, ಶೌಕತ್ ಕಿನ್ಯಾ, ಅಬ್ಬಾಸ್ ಪುತ್ತೂರು, ನವಾಝ್ ಮುರಾ, ಅಬ್ದುಲ್ಲಾ ಕಂಬಳಬೆಟ್ಟು, ನಿಝಾಂ ಮುರಾ, ಹಾರಿಸ್ ಕುರ್ನಾಡು, ಸಲೀಂ ಅಂಡೆಕೇರಿ, ಇಸ್ಮಾಯಿಲ್ ಇನೋಲಿ ಎಂಬವರನ್ನು ಆಯ್ಕೆ ಮಾಡಲಾಯಿತು.

ಹನೀಫ್ ಹಿಮಮಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಝ್ವೀರ್ ಬಡಕಬೈಲು ಧನ್ಯವಾದ ಅರ್ಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News