ಶಿಕ್ಷಕರ ಸಮಸ್ಯೆ ನಿವಾರಣೆಯಾಗಲಿ

Update: 2019-03-19 18:49 GMT

ಮಾನ್ಯರೇ

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಭಡ್ತಿ ಹೊಂದಿದ ಶಿಕ್ಷಕರಿಗೆ 6ನೇ ವೇತನ ಆಯೋಗದನ್ವಯ ವೇತನ ನಿಗದಿ ಮಾಡುವಾಗ ತಡೆಹಿಡಿಯಲಾಗಿದ್ದ ವಿಶೇಷ ಭತ್ತೆ ಹಾಗೂ ಹೆಚ್ಚುವರಿ ವೇತನ ಭಡ್ತಿಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವಂತೆ ಅಕ್ಟೋಬರ್ 2018ರಲ್ಲಿಯೇ ಸರಕಾರ ಆದೇಶಿಸಿರುವುದು ಸರಿಯಷ್ಟೇ. ಆದರೆ ಎಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಇದನ್ನು ಅಳವಡಿಸಿಕೊಳ್ಳಲು ಈವರೆಗೆ ಅವಕಾಶ ಮಾಡಿಕೊಟ್ಟಿಲ್ಲ.

ತಂತ್ರಾಂಶ ಬರುವುದಕ್ಕೂ ಮೊದಲು ನೌಕರರ ವೇತನ ಬಿಲ್ಲುಗಳನ್ನು ಆಯಾಯ ಕಚೇರಿಯಲ್ಲೇ ತಯಾರಿಸಲಾಗುತ್ತಿತ್ತು. ನೌಕರರಿಗೆ ಅನುಕೂಲವಾಗುವ ಯಾವುದೇ ಆದೇಶ ಆರ್ಥಿಕ ಇಲಾಖೆಯಿಂದ ಹೊರಬಿದ್ದ ಕೆಲವೇ ದಿನಗಳಲ್ಲಿ ಹೆಚ್ಚಿನ ಡಿ.ಡಿ.ಒ.ಗಳು ಆದೇಶದ ಅನುಸಾರ ಹಣ ಪಡೆದುಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದರು. ಸದ್ಯ ಗಣಕೀಕರಣದಿಂದಾಗಿ ಕೇವಲ ಎರಡು ಮೂರು ದಿನಗಳಲ್ಲಿ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿದ್ದರೂ ನಾಲ್ಕು-ಐದು ತಿಂಗಳಿನಿಂದ ಶಿಕ್ಷಕರು ಕಾಯಬೇಕಾದ ಪರಿಸ್ಥಿತಿ ಇರುವುದು ದುರದೃಷ್ಟಕರ.

ಸರಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಶಿಕ್ಷಕರ ಸಮಸ್ಯೆ ನಿವಾರಣೆಗೆ ಮುಂದಾಗಲಿ.

-ಪುಟ್ಟದಾಸು, ಮಂಡ್ಯ

Writer - -ಪುಟ್ಟದಾಸು, ಮಂಡ್ಯ

contributor

Editor - -ಪುಟ್ಟದಾಸು, ಮಂಡ್ಯ

contributor

Similar News