ಬಾಂಗ್ಲಾ ವಿರುದ್ಧ ಚಾಂಪಿಯನ್ ಭಾರತ ಫೇವರಿಟ್

Update: 2019-03-20 03:38 GMT

ಇಂದು ಸೆಮಿಫೈನಲ್

ಬೀರತ್‌ನಗರ(ನೇಪಾಳ), ಮಾ.19: ಸ್ಯಾಫ್ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಅಜೇಯವಾಗಿ ಸೆಮಿಫೈನಲ್ ತಲುಪಿರುವ ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡ ಬುಧವಾರ ಇಲ್ಲಿ ಸಹೀದ್ ರಂಗಶಾಲಾ ಕ್ರೀಡಾಂಗಣದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

 2010ರಲ್ಲಿ ಈ ಟೂರ್ನಿಯು ಆರಂಭವಾಗಿ ಇಲ್ಲಿಯವರೆಗಿನ ಎಲ್ಲ ಟ್ರೋಫಿಗಳನ್ನು ಭಾರತ ತನ್ನ ಮಡಿಲಿಗೆ ಹಾಕಿಕೊಂಡಿದೆ. 2016ರಲ್ಲಿ ಕಳೆದ ಬಾರಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 3-1ರಿಂದ ಮಣಿಸಿ ಭಾರತ ಟ್ರೋಫಿ ಗೆದ್ದಿತ್ತು.

ಕೋಚ್ ಮಾಯ್ಮೋಲ್ ರಾಕಿ ನೇತೃತ್ವದ ತಂಡ ಗುಂಪು ಹಂತದ ಮೊದಲ ಪಂದ್ಯದಲ್ಲಿ ಮಾಲ್ಡೀವ್ಸ್ ತಂಡವನ್ನು 6-0ಯಿಂದ ಮಣಿಸಿದ್ದರೆ ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು 5-0 ಗೋಲುಗಳಿಂದ ಬಗ್ಗುಬಡಿದಿದೆ. ತನ್ನ ಶಿಷ್ಯೆಯರು ಬುಧವಾರದ ಪಂದ್ಯವನ್ನು ಸುಲಭವಾಗಿಸಿಕೊಳ್ಳಲು ಗಮನಹರಿಸಿದ್ದಾರೆ ಎಂದು ಕೋಚ್ ಅಭಿಪ್ರಾಯಪಡುತ್ತಾರೆ.

ನೇಪಾಳ ಪ್ರವಾಸಕ್ಕೂ ಮುನ್ನ ಭಾರತ ಮಹಿಳಾ ತಂಡ ಕಳೆದ ವರ್ಷದ ಡಿಸೆಂಬರ್‌ನಿಂದ ಭಾರತದಲ್ಲಿ ಹೀರೋ ಗೋಲ್ಡ್ ಕಪ್ ಹೊರತುಪಡಿಸಿ ಹಾಂಕಾಂಗ್, ಇಂಡೋನೇಶ್ಯ ಹಾಗೂ ಟರ್ಕಿಯಲ್ಲಿ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿತ್ತು.

  ಮಯನ್ಮಾರ್‌ನಲ್ಲಿ ನವೆಂಬರ್ 2018ರಲ್ಲಿ 2020ರ ಒಲಿಂಪಿಕ್ಸ್ ಅರ್ಹತಾ ಮೊದಲ ಸುತ್ತಿನಲ್ಲಿ ಉಭಯ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಭಾರತ 7-1 ಗೋಲುಗಳಿಂದ ಜಯಿಸಿ ಪಾರಮ್ಯ ಮೆರೆದಿದೆ. ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಗಿದೆ. 10 ನಿಮಿಷಗಳೊಳಗೆ ಮೊದಲ ಗೋಲು ದಾಖಲಾಗಿದೆ. ಶ್ರೀಲಂಕಾ ತಂಡವು ಜಾಗರೂಕವಾಗಿದ್ದು ಪಂದ್ಯ ಕುತೂಲದಿಂದ ಕೂಡಿರಲಿದೆ ಎಂದು ಕೋಚ್ಮಾಯ್ಮೋಲ್ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News