ಗ್ರೀನ್ ಸಿಟಿಯಾಗುವತ್ತ ರಿಯಾದ್ ನಗರ

Update: 2019-03-21 08:49 GMT

ರಿಯಾದ್, 21: ಸೌದಿ ಅರೇಬಿಯಾದ ರಾಜಧಾನಿಯಾದ ರಿಯಾದನ್ನು ಗ್ರೀನ್‌ಸಿಟಿಯನ್ನಾಗಿ ಮಾಡುವ ಅತಿದೊಡ್ಡ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. 86 ಬಿಲಿಯನ್ ರಿಯಾಲ್ ಮೊತ್ತದ ನಾಲ್ಕು ಯೋಜನೆಗಳನ್ನು ದೊರೆ ಸಲ್ಮಾನ್ ಪ್ರಕಟಿಸಿದ್ದಾರೆ. ಈ ವೇಳೆ ಉತ್ತರಾಧಿಕಾರಿ ಮುಹಮ್ಮದ್ ಬಿನ್ ಸಲ್ಮಾನ್ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ಕಿಂಗ್ ಸಲ್ಮಾನ್ ಪಾರ್ಕ್, ಸ್ಪೋರ್ಟ್ಸ್ ಟ್ರಾಕ್, ಗ್ರೀನ್ ರಿಯಾದ್, ಆರ್ಟ್ಸ್ ಸೆಂಟರ್ ಯೋಜನೆಗಳಲ್ಲಿ ಒಳಗೊಂಡಿವೆ. ಪಾರ್ಕ್‌ನ ಗಾತ್ರ 13.4 ಸ್ಕ್ವಯರ್ ಕಿ.ಮೀ.ಗಳಾಗಿವೆ. ಇದು ಜಗತ್ತಿನಲ್ಲೇ ಅ್ಯತಂತ ದೊಡ್ಡ ಪಾರ್ಕ್ ಎಂಬ ಹೆಗ್ಗಳಿಕೆಗೆ ಪ್ರಾತ್ರವಾಗಲಿದೆ.‘ಗ್ರೀನ್ ರಿಯಾದ್’ ಯೋಜನೆ ಜಾರಿಗೆ ಬಂದರೆ ರಿಯಾದ್‌ನಲ್ಲಿ ಈಗ ಇರುವುದಕ್ಕಿಂತ 16 ಪಟ್ಟು ಹೆಚ್ಚು ಹಸಿರು ತುಂಬಲಿದೆ. ಇದಕ್ಕಾಗಿ 75 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು. ಮ್ಯೂಸಿಯಂ, ಥಿಯೇಟರ್, ವಿವಿಧ ಗ್ಯಾಲರಿಗಳು ಸೇರಿ 1000 ಪ್ರಾದೇಶಿಕ, ಅಂತಾರಾಷ್ಟ್ರ ಕಲಾವಿದರ ಸಹಭಾಗಿತ್ವದಲ್ಲಿ ಎಕ್ಸಿಬಿಷನ್ ಆರ್ಟ್ಸ್ ಸೆಂಟರ್‌ನಲ್ಲಿ ನಡೆಸಲಾಗುವುದು.ನಗರದ ದಕ್ಷಿಣ ಪಶ್ಚಿಮವನ್ನು ಬಂಧಿಸುವ 135 ಕಿ.ಮೀ. ದೂರದಲ್ಲಿ ಸ್ಪೋರ್ಟ್ಸ್ ಟ್ರಾಕ್‌ನ್ನು ನಿರ್ಮಿಸಲಾಗುವುದು. ಸೈಕ್ಲಿಂಗ್, ಕುದುರೆ ಸವಾರಿ, ಜಾಗಿಂಗ್, ಕ್ರೀಡೆ, ಸಾಂಸ್ಕೃತಿಕ ಕೇಂದ್ರಗಳನ್ನು ಸ್ಪೋರ್ಟ್ಸ್ ಟ್ರಾಕ್ ಒಳಗೊಳ್ಳುತ್ತವೆ.ಮಿಷನ್ 2030ರ ಭಾಗವಾಗಿ ಘೋಷಿಸಲಾದ ಈ ನಾಲ್ಕು ಯೋಜನೆಗಳು ಸ್ವದೇಶಿಗಳಿಗಾಗಿ 70,000 ಹೊಸ ಉದ್ಯೋಗಗಳನ್ನು ನಿರ್ಮಿಸಲಿವೆ.ಯೋಜನೆಗಳ ಭಾಗವಾಗಿ ಹೌಸಿಂಗ್, ಹಾಸ್ಪಿಟಾಲಿಟಿ, ಕಾರ್ಪೊರೇಟ್, ಶಿಕ್ಷಣ, ವಸತಿ, ವಾಣಿಜ್ಯ ಕ್ಷೇತ್ರಗಳ ಒಳಗೆ ಹಾಗೂ ಹೊರಗಿರುವ ಹೂಡಿಕೆದಾರರಿಗೆ ಅವಕಾಶ ನೀಡಲಾಗುವುದು. ದೇಶದ ಜನರ ಜೀವನ ಮಟ್ಟವನ್ನು ಅಭಿವೃದ್ಧಿಗೊಳಿಸುವುದರೊಂದಿಗೆ ವಿವಿಧ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲಾಗುವುದು ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News