ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್: ಭಾರತ ಹೊರಕ್ಕೆ

Update: 2019-03-22 03:31 GMT

ಹಾಂಕಾಂಗ್, ಮಾ.21: ಚೈನೀಸ್ ತೈಪೆ ತಂಡಕ್ಕೆ 2-3 ಅಂತರದಿಂದ ಮಣಿದ ಭಾರತ ಬ್ಯಾಡ್ಮಿಂಟನ್ ತಂಡ ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದೆ. .ಸೋಲಿನ ಮಧ್ಯೆಯೂ ಉದಯೋನ್ಮುಖ ತಾರೆಗಳಾದ ಅಶ್ಮಿತಾ ಚಲಿಹಾ ಹಾಗೂ ಡಬಲ್ಸ್ ಜೋಡಿ ಅರುಣ್ ಜಾರ್ಜ್-ಸನ್ಯಾಮ್ ಶುಕ್ಲಾ ಅವರ ಪ್ರದರ್ಶನ ಗಮನ ಸೆಳೆಯಿತು.

ಐದು ಪಂದ್ಯಗಳ ಟೂರ್ನಿಯಲ್ಲಿ ಅಶ್ಮಿತಾ ಹಾಗೂ ಜಾರ್ಜ್-ಶುಕ್ಲಾ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು 2-0 ಮುನ್ನಡೆ ಪಡೆದರು. ಆದರೆ ನಂತರದ ಮೂರೂ ಪಂದ್ಯಗಳನ್ನು ಸೋತು ‘ಬಿ’ ಗುಂಪಿನಿಂದ ಮುನ್ನಡೆ ಪಡೆಯಲು ವಿಫಲವಾಯಿತು.

 ‘ಬಿ’ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಭಾರತ ಸಿಂಗಾಪುರ ವಿರುದ್ಧ ಹೀನಾಯ ಸೋಲಿಗೆ ಒಳಗಾಗಿತ್ತು. ಈ ಜಯದೊಂದಿಗೆ ತೈಪೆ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.

ಜಾರ್ಜ್-ಶುಕ್ಲಾ ಜೋಡಿಯು ಮೊದಲ ಪಂದ್ಯದಲ್ಲಿ ವಿಶ್ವದ ನಂ.14 ಜೋಡಿ ತೈಪೆಯ ಲಿಯಾವೊ ಚುನ್-ಚಿಂಗ್ ಹೆಂಗ್ ಜೋಡಿಗೆ 21-17, 17-21, 21-14 ಗೇಮ್‌ಗಳಿಂದ ಸೋಲುಣಿಸಿತು.

ಮತ್ತೊಂದು ಪಂದ್ಯದಲ್ಲಿ ಅಸ್ಸಾಂನ 19 ವರ್ಷದ ಚಲಿಹಾ 21-18, 17-21, 21-19 ಗೇಮ್‌ಗಳಿಂದ ತನ್ನ ಎದುರಾಳಿಗೆ ಸೋಲುಣಿಸಿದರು. ಈ ವೇಳೆ ಭಾರತ 2-0 ಮುನ್ನಡೆ ಸಾಧಿಸಿತ್ತು.

ಮೂರನೇ ಪಂದ್ಯದಲ್ಲಿ ವಿಶ್ವ ನಂ.32ನೇ ಆಟಗಾರ ವಾಂಗ್ ಝು ವೇ ಅವರು, ಮೂರು ಬಾರಿಯ ಭಾರತದ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ಅವರನ್ನು 21-7, 16-21, 23-21 ರಿಂದ ಮಣಿಸಿದರು.

ಭಾರತದ ಮಹಿಳಾ ಡಬಲ್ಸ್ ಜೋಡಿ ಆರತಿ ಸಾರಾ ಸುನೀಲ್-ಋತುಪರ್ಣಾ ಪಂಡಾ ತೈಪೆಯ ಚಾಂಗ್ ಚಿಂಗ್ ಹುಯ್ -ಯಾಂಗ್ ಚಿಂಗ್ ತುನ್ ಜೋಡಿಗೆ 19-21, 17-21 ನೇರ ಗೇಮ್‌ಗಳಿಂದ ಮಣಿಯಿತು. ಮಿಶ್ರ ಡಬಲ್ಸ್ ನಲ್ಲಿ ಶಿಖಾ ಗೌತಮ್ - ಶ್ಲೋಕ್ ರಾಮಚಂದ್ರನ್ ಜೋಡಿಯು ಶೆ ಪೇ ಶಾನ್ ಹಾಗೂ ಸೆಂಗ್ ಮಿನ್ ಹಾವ್ ಜೋಡಿ ಎದುರು ಸುಲಭವಾಗಿ ಸೋಲಿಗೆ ಒಳಗಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News