ಅರಬ್ಬಿ ಸಮುದ್ರದಲ್ಲಿ ಬೃಹತ್ ತೈಲ ನಿಕ್ಷೇಪ

Update: 2019-03-23 17:59 GMT

ಇಸ್ಲಾಮಾಬಾದ್, ಮಾ. 23: ಅರಬ್ಬಿ ಸಮುದ್ರದಲ್ಲಿ ತೈಲ ಮತ್ತು ಅನಿಲದ ಬೃಹತ್ ನಿಕ್ಷೇಪವೊಂದನ್ನು ಪತ್ತೆಹಚ್ಚಲಾಗಿದ್ದು, ಪಾಕಿಸ್ತಾನದ ಅದೃಷ್ಟದ ಬಾಗಿಲು ತೆರೆಯುವ ಹಂತದಲ್ಲಿದೆ ಎಂದು ಆ ದೇಶದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಈ ಸಂಶೋಧನೆಯು ಆರ್ಥಿಕ ಸಂಕಷ್ಟಕ್ಕೀಡಾಗಿರುವ ದೇಶದ ಆರ್ಥಿಕ ಸಮಸ್ಯೆಗಳನ್ನು ನೀಗಿಸಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ತೈಲಕ್ಕಾಗಿ ಸಮುದ್ರದಲ್ಲಿ ನಡೆಯುವ ಉತ್ಖನನ ಕಾರ್ಯ ಅಂತಿಮ ಹಂತದಲ್ಲಿದೆ ಹಾಗೂ ಭಾರೀ ಪ್ರಮಾಣದ ನಿಕ್ಷೇಪವನ್ನು ನಾವು ನೋಡುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

‘‘ಈ ಪಾಕೃತಿಕ ಸಂಪತ್ತು ಪಾಕಿಸ್ತಾನಕ್ಕೆ ಅಗಾಧ ಪ್ರಮಾಣದಲ್ಲಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ. ‘ಎಕಾನ್‌ ಮೊಬೈಲ್’ ನೇತೃತ್ವದಲ್ಲಿ ಸಮುದ್ರದಲ್ಲಿ ನಡೆಯುತ್ತಿರುವ ಅಗೆತದಿಂದ ನಮ್ಮಲ್ಲಿ ಹುಟ್ಟಿರುವ ನಿರೀಕ್ಷೆ ಮತ್ತು ಭರವಸೆಯು ಸತ್ಯವಾಗಲಿದೆ’’ ಎಂದು ಅವರು ಗುರುವಾರ ಹೇಳಿದರು.

ಪತ್ರಿಕಾ ಸಂಪಾದಕರು ಮತ್ತು ಹಿರಿಯ ಪತ್ರಕರ್ತರ ಗುಂಪೊಂದರ ಜೊತೆ ಅನೌಪಚಾರಿಕ ಸಂವಾದ ನಡೆಸಿದ ವೇಳೆ, ಇಮ್ರಾನ್ ಈ ಮಾಹಿತಿಯನ್ನು ಹೊರಗೆಡವಿದರು.

‘‘ಈಗಾಗಲೇ ಮೂರು ವಾರಗಳ ವಿಳಂಬವಾಗಿದೆ. ಆದರೆ, ನಮಗೆ ಲಭಿಸಿರುವ ಸೂಚನೆಗಳ ಆಧಾರದಲ್ಲಿ ಹೇಳುವುದಾದರೆ, ಸಮುದ್ರದ ನಮ್ಮ ಜಲಪ್ರದೇಶದಲ್ಲಿ ಬೃಹತ್ ನಿಕ್ಷೇಪವೊಂದು ಪತ್ತೆಯಾಗುವ ಸಾಧ್ಯತೆ ಉಜ್ವಲವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News