ಮೊಝಾಂಬಿಕ್ ಚಂಡಮಾರುತ: ಮೃತರ ಸಂಖ್ಯೆ 417ಕ್ಕೆ ಏರಿಕೆ

Update: 2019-03-23 18:18 GMT

ಬೇರಾ (ಮೊಝಾಂಬಿಕ್), ಮಾ. 23: ಆಫ್ರಿಕ ಖಂಡದ ದೇಶ ಮೊಝಾಂಬಿಕ್‌ಗೆ ಇತ್ತೀಚೆಗೆ ಅಪ್ಪಳಿಸಿದ ಚಂಡಮಾರುತದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆ 417ಕ್ಕೇರಿದೆ.

‘ಇಡಾಯ್’ ಚಂಡಮಾರುತವು ಕಳೆದ ವಾರದ ಶುಕ್ರವಾರ ಮಧ್ಯ ಮೊಝಾಂಬಿಕ್‌ನ ಕರಾವಳಿಯನ್ನು ಧೂಳೀಪಟ ಮಾಡಿರುವುದನ್ನು ಸ್ಮರಿಸಬಹುದಾಗಿದೆ. ಅತ್ಯಂತ ವೇಗದ ಬಿರುಗಾಳಿ ಮತ್ತು ಜಡಿ ಮಳೆಯಿಂದಾಗಿ ಭಾರೀ ಪ್ರವಾಹವೇ ಉಂಟಾಗಿತ್ತು.

‘‘ಈವರೆಗೆ 417 ಸಾವುಗಳು ದಾಖಲಾಗಿವೆ’’ ಎಂದು ಮೊಝಾಂಬಿಕ್‌ನ ಭೂಮಿ ಮತ್ತು ಪರಿಸರ ಸಚಿವ ಸೆಲ್ಸೊ ಕೊರೈಯ ಬಂದರು ನಗರ ಬೇರಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸುಮಾರು 90,000 ಮೊಝಾಂಬಿಕ್ ಪ್ರಜೆಗಳನ್ನು ಪರಿಹಾರ ಶಿಬಿರಗಳಿಗೆ ಸಾಗಿಸಲಾಗಿದೆ. ಸಾವಿರಾರು ಮಂದಿ ಈಗಲೂ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ.

ಚಂಡಮಾರುತವು ಸುಮಾರು 10 ಲಕ್ಷ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಸರಕಾರ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News