ಕೆನಡದಲ್ಲಿ ಪತ್ತೆಯಾದ ಡೈನಸಾರ್ ಅತಿ ದೊಡ್ಡದು

Update: 2019-03-23 18:19 GMT

 ಮಾಂಟ್ರಿಯಲ್, ಮಾ. 23: 1991ರಲ್ಲಿ ಪಶ್ಚಿಮ ಕೆನಡದಲ್ಲಿ ಪತ್ತೆಯಾದ ಡೈನಸಾರ್ ಕುಟುಂಬಕ್ಕೆ ಸೇರಿದ ‘ಟೈರನಸಾರಸ್ ರೆಕ್ಸ್’ ಈ ವರ್ಗಕ್ಕೆ ಸೇರಿದ ಜಗತ್ತಿನ ಅತಿ ದೊಡ್ಡ ಪ್ರಾಣಿಯಾಗಿತ್ತು ಎಂದು ವಿಜ್ಞಾನಿಗಳ ತಂಡವೊಂದು ಶುಕ್ರವಾರ ಹೇಳಿದೆ.

ದೈತ್ಯ ಜೀವಿಯ ಅಸ್ಥಿಪಂಜರವನ್ನು ಪುನರ್‌ರಚಿಸುವ ದಶಕಗಳ ಕಾಲದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಜ್ಞಾನಿಗಳು ಇದನ್ನು ಘೋಷಿಸಿದ್ದಾರೆ.

ಆ ದೈತ್ಯ ಜೀವಿಯು 13 ಮೀಟರ್ ಉದ್ದವಾಗಿತ್ತು ಹಾಗೂ ಬಹುಶಃ 8,800 ಕೆಜಿ ತೂಗುತ್ತಿತ್ತು ಎಂದು ಆಲ್ಬರ್ಟ್ ವಿಶ್ವವಿದ್ಯಾನಿಲಯದ ತಂಡವೊಂದು ತಿಳಿಸಿದೆ. ಅದು ಮಾಂಸಾಹಾರಿ ಡೈನಸಾರಸ್‌ಗಳಲ್ಲಿಯೇ ಅತಿ ದೊಡ್ಡದಾಗಿತ್ತು.

ಅದರ ಅಸ್ಥಿಪಂಜರ 1991ರಲ್ಲಿಯೇ ಪತ್ತೆಯಾಗಿದ್ದರೂ, ಅದರ ಮೂಳೆಗಳನ್ನು ಆವರಿಸಿದ್ದ ಗಟ್ಟಿ ಕಲ್ಲನ್ನು ಬಿಡಿಸಲು ವಿಜ್ಞಾನಿಗಳಿಗೆ ಒಂದು ದಶಕವೇ ಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News