ರಿಯಾದ್: ಕೆಸಿಎಫ್ ರಬುವ ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ

Update: 2019-03-25 13:30 GMT

ರಿಯಾದ್,ಮಾ.25: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಅಧೀನದಲ್ಲಿರುವ ರಬುವ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಮಿತಿ ಅಧ್ಯಕ್ಷರಾದ ಸಿರಾಜುದ್ದೀನ್ ವಳಾಲು ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಇಸ್ಮಾಯಿಲ್ ಮದನಿ ಒಕ್ಕೆತ್ತೂರು ಖಿರಾಅತ್ ಪಠಿಸಿದರು. ರಿಯಾದ್ ಝೋನ್ ಆಡ್ಮಿನ್ ವಿಂಗ್ ಚೆಯರ್ಮ್ಯಾನ್ ಇಸ್ಮಾಯಿಲ್ ಮೊಂಟೆಪದವು ಉದ್ಘಾಟಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಆರ್ಗನೈಝ್ ವಿಂಗ್ ಚೆಯರ್ಮ್ಯಾನ್ ಸಿದ್ದೀಖ್ ಸಖಾಫಿ ಪೆರುವಾಯಿ ವಿಷಯ ಮಂಡಿಸಿದರು. ಬಳಿಕ ಕಾರ್ಯದರ್ಶಿ ಪಿ.ಕೆ.ಎಂ ಹನೀಫ್ ಉರುವಾಲು ಪದವು ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.

ಚುಣಾವಣಾ ವೀಕ್ಷಕರಾಗಿ ಆಗಮಿಸಿದ ಝೋನ್ ನಾಯಕರಾದ ಹನೀಫ್ ಕಣ್ಣೂರು ಮತ್ತು ಇಸ್ಮಾಯಿಲ್ ಮೊಂಟೆಪದವು ಅವರ ನೇತೃತ್ವದಲ್ಲಿ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ನಝೀರ್ ಮುಸ್ಲಿಯಾರ್ ನಂದಾವರ, ಪ್ರ.ಕಾರ್ಯದರ್ಶಿಯಾಗಿ ಪಿ.ಕೆ.ಎಂ.ಹನೀಫ್ ಉರುವಾಲು ಪದವು, ಕೋಶಾಧಿಕಾರಿಯಾಗಿ ಸಿರಾಜುದ್ದೀನ್ ವಳಾಲು ನೇಮಕಗೊಂಡರು. 

ಸಂಘಟನಾ ಇಲಾಖೆ ಅಧ್ಯಕ್ಷರಾಗಿ ಸಂಶುದ್ದೀನ್ ಉಜಿರೆ, ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ಹಳೆಯಂಗಡಿ, ಶಿಕ್ಷಣಾ ಇಲಾಖೆ ಅಧ್ಯಕ್ಷರಾಗಿ ಇಸ್ಮಾಯಿಲ್ ಮದನಿ ಕ್ಕೆತ್ತೂರು, ಕಾರ್ಯದರ್ಶಿಯಾಗಿ ರಿಯಾಝ್ ಮಲಾರ್, ಸಾಂತ್ವನ ಇಲಾಖೆ ಅಧ್ಯಕ್ಷರಾಗಿ ಪಿ.ಕೆ.ಎಂ.ಆಸಿಫ್ ಉರುವಾಲು ಪದವು, ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಹಳೆಯಂಗಡಿ, ಪಬ್ಲಿಷಿಂಗ್ ಇಲಾಖೆ ಅಧ್ಯಕ್ಷರಾಗಿ ಇಲ್ಯಾಸ್ ಅಜ್ಜಿಕಟ್ಟೆ, ಕಾರ್ಯದರ್ಶಿಯಾಗಿ ಇಸ್ಮಾಯಿಲ್ ದೊಂಪ, ಹಾಗೂ 13 ಮಂದಿ ಕಾರ್ಯಕಾರಿ ಸಮಿತಿ ಮತ್ತು 5 ಮಂದಿ ಝೋನ್ ಕೌನ್ಸಿಲರ್ ಗಳನ್ನೊಳಗೊಂಡ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಬಳಿಕ ಚುಣಾವಣಾ ನಾಯಕ ಹನೀಫ್ ಕಣ್ಣೂರು ಹಾಗೂ ನೂತನ ಅಧ್ಯಕ್ಷ ನಝೀರ್ ಮುಸ್ಲಿಯಾರ್ ಮಾತನಾಡಿದರು. ನೂತನ ಕಾರ್ಯದರ್ಶಿ ಪಿ.ಕೆ.ಎಂ.ಹನೀಫ್ ಉರುವಾಲು ಪದವು ಸ್ವಾಗತಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News